ನೀರುಳ್ಳಿ ಬೆಲೆ ಏರಿಕೆ- ಜನರ ಜೇಬಿಗೆ ಕತ್ತರಿ

ನೀರುಳ್ಳಿ ಬೆಲೆ ಏರಿಕೆ- ಜನರ ಜೇಬಿಗೆ ಕತ್ತರಿ

Aug 11, 2017 05:51:39 PM (IST)
ನೀರುಳ್ಳಿ ಬೆಲೆ ಏರಿಕೆ- ಜನರ ಜೇಬಿಗೆ ಕತ್ತರಿ

ಬೆಂಗಳೂರು: ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ತರಕಾರಿ ಬೆಲೆ ಒಂದಲ್ಲ ಒಂದು ರೀತಿಯಲ್ಲಿ ಬಿಸಿ ನೀಡುತ್ತಿದೆ. ಪ್ರಸ್ತುತ ಟೊಮೆಟೋ ದರ ಇಳಿದಿದ್ದು, ಇದೀಗ ಈರುಳ್ಳಿ ದರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.ಏಕಾಏಕಿ ಈರುಳ್ಳಿ ದರ ಏರಿಕೆಯಾಗಿದೆ ಜನರು ಕಂಗಲಾಗಿದ್ದಾರೆ. ಕೆಜಿಗೆ 25 ರೂ. ಇದ್ದ ಈರುಳ್ಳಿ ದರ ಈಗ 80ರ ಗಡಿ ದಾಟಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷ ಬರಗಾಲದಿಂದ ಶೇ. 75 ರಷ್ಟು ಬೆಳೆ ಕುಸಿತಗೊಂಡಿದೆ.

ಹೀಗಾಗಿ ಸಿಲಿಕಾನ್ ಸಿಟಿಯ ಯಶವಂತಪುರ ಎಪಿಎಂಸಿ ಸೇರಿ ಮಾರುಕಟ್ಟೆಗೆ ಬರಬೇಕಿದ್ದ ಈರುಳ್ಳಿ ಪ್ರಮಾಣ ಕುಸಿದಿದೆ. 1000 ಲಾರಿಗಳು ಬರಬೇಕಿದ್ದ ಕಡೆಗಳಲ್ಲಿ ಕೇವಲ 300 ಲಾರಿಗಳು ಬರುತ್ತಿವೆ. ಇದೀಗ ಈರುಳ್ಳಿ ಬೇಡಿಕೆ ಪೂರೈಸಲು ಮಹಾರಾಷ್ಟ್ರ-ಗುಜರಾತ್ನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ ಕೂಡ ಬೆಲೆ ಏರಿಕೆ ನಿಲ್ಲುವ ಲಕ್ಷಣವಿಲ್ಲ. ತಿಂಗಳಾಂತ್ಯದ ವೇಳೆ ಈರುಳ್ಳಿ 100 ರೂ. ದರ ಗಡಿ ದಾಟುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.