ಮತ್ತೇ ಜೈಲು ಪಾಲಾಗುವ ಭೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ

ಮತ್ತೇ ಜೈಲು ಪಾಲಾಗುವ ಭೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ

YK   ¦    Nov 07, 2018 11:54:08 AM (IST)
ಮತ್ತೇ ಜೈಲು ಪಾಲಾಗುವ ಭೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತ್ತೇ ಬಂಧನ ಭೀತಿ ಎದುರಾಗಿದೆ. ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ಆರೋಪದಡಿಯಲ್ಲಿ ರೆಡ್ಡಿ ಮೂವರು ಆಪ್ತರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಅದಲ್ಲದೆ ಜನಾರ್ದನ ರೆಡ್ಡಿ ವಿಚಾರಣೆಗೆ ಸಿಸಿಬಿ ತಂಡವು ಏಕಕಾಲದಲ್ಲಿ ಬೆಂಗಳೂರಿನ ಪಾರಿಜಾತ ಅಪಾರ್ಟ್ ಮೆಂಟ್ ಟ್ವಿನ್ ಟವರ್, ಮೊಳಕಾಲ್ಮೂರು ತೋಟದ ಮನೆ, ಬಳ್ಳಾರಿಯಲ್ಲಿಯೂ ದಾಳಿ ನಡೆಸಿದೆ.

ನಿನ್ನೆಯಿಂದ ಜನಾರ್ದನ ರೆಡ್ಡಿ ನಾಪತ್ತೆಯಾಗಿದ್ದಾರೆ.

ಬಂಧನಕ್ಕಾಗಿ ಸಿಸಿಬಿ ಬಲೆ ಬೀಸಿದ್ದು ಜನಾರ್ದನ ರೆಡ್ಡಿ ಅವರ ಮೊಬೈಲ್ ನೆಟ್ ವರ್ಕ್ ನ್ನು ಬಳಸಿ ಕಾರ್ಯಾಚರಣೆ ನಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.