ಟಿವಿ ಚಾನೆಲ್ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದವರ ಬಂಧನ

ಟಿವಿ ಚಾನೆಲ್ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದವರ ಬಂಧನ

YK   ¦    Oct 11, 2018 03:52:48 PM (IST)
ಟಿವಿ ಚಾನೆಲ್ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದವರ ಬಂಧನ

ಮಂಗಳೂರು: ಲೋಕಲ್ ಚಾನೆಲ್ ಹೆಸರಿನಲ್ಲಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ 6 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಂತೋಷ್, ಅಶೋಕ್, ಮಹಾದೇವ, ರಾಕೇಶ್ ಗೌಡ, ಆನಂದ ಹಾಗೂ ನವೀನ್ ಎಂದು ಗುರುತಿಸಲಾಗಿದೆ.

ಬಂಧಿತರು ಪ್ರಜಾ ಪ್ರತಿನಿಧಿ ಟಿವಿ ಚಾನೆಲ್ ಹೆಸರನ್ನು ಬಳಸಿಕೊಂಡು ನಗರದ ಕೆಲವೆಡೆ ಹಣ ಸುಲಿಗೆ ಮಾಡಿದ್ದಾರೆ. ನಗರದಲ್ಲಿರುವ ಕೆಲವೊಂದು ಅಂಗಡಿಗಳ ವಿಡಿಯೋ ಶೂಟ್ ಮಾಡಿ ಅದನ್ನೇ ಮುಂದಿಟ್ಟುಕೊಂಡು ಅಂಗಡಿ ಮಾಲೀಕರಿಗೆ ಹಣ ಬೇಡಿಕೆಯನ್ನಿಟ್ಟಿದ್ದಾರೆ.

ಹಣ ಕೊಡದಿದ್ದರೆ ಅಂಗಡಿ ವಿರುದ್ಧ ನೆಗೆಟಿವ್ ಸುದ್ದಿ ಮಾಡುವುದಾಗಿ ಅವರಿಗೆ ಬೆದರಿಕೆಯನ್ನೊಡ್ಡಿದ್ದಾರೆ.

ಈ ಸಂಬಂಧ ಬನಶಂಕರಿ, ಬಸವನಗುಡಿ ಹಾಗೂ ಇನ್ನಿತರ ಕಡೆ ಅಂಗಡಿಗಳಲ್ಲಿ ಸುಲಿಗೆ ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿದೆ.

More Images