ಡಿಕೆಶಿ ಬಂಧನ ಖಂಡಿಸಿ ಇಂದು 'ರಾಜಭವನ ಚಲೋ'

ಡಿಕೆಶಿ ಬಂಧನ ಖಂಡಿಸಿ ಇಂದು 'ರಾಜಭವನ ಚಲೋ'

YK   ¦    Sep 11, 2019 10:16:06 AM (IST)
ಡಿಕೆಶಿ ಬಂಧನ ಖಂಡಿಸಿ ಇಂದು 'ರಾಜಭವನ ಚಲೋ'

ಬೆಂಗಳೂರು: ಕಾಂಗ್ರೆಸ್ ನಾಯಕ, ಶಾಸಕ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಇಂದು ವಿಶ್ವ ಒಕ್ಕಲಿಗರ ಒಕ್ಕೂಟದಡಿ ವಿವಿಧ ಸಂಘಟನೆಗಳು ರಾಜಭವನ ಚಲೋ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು. ಪ್ರತಿಭಟನೆಯಲ್ಲಿ ಒಕ್ಕಲಿಗ ಸಮುದಾಯ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ಡಿಕೆಶಿ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಂಬಂಧ ಸೋಮವಾರ ರಾತ್ರಿ ಟ್ವೀಟ್ ಮಾಡಿದ  ಡಿ.ಕೆ. ಶಿವಕುಮಾರ್, ನನ್ನ ಬೆಂಬಲಕ್ಕೆ ನಿಂತು ಬೃಹತ್ ಪ್ರತಿಭಟನೆ ಕೈಗೊಂಡಿದಕ್ಕೆ ಎಲ್ಲ  ನಾಯಕರಿಗೆ, ಹಿತೈಸಿಗಳಿಗದ, ಬೆಂಬಲಿಗರಿಗೆ ಹಾಗೂ ಸ್ನೇಹಿತರಿಗೆ ನನ್ನ ಧನ್ಯವಾದಗಳು. ಪ್ರತಿಭಟನೆ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುವಾಗಿ ನಡೆಸಿ. ಯಾವುದೇ ಸಾರ್ವಜನಿಕ  ಹಾನಿಗೆ ಎಡೆ ಮಾಡಿಕೊಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.