ಬೆಂಗಳೂರು ಡೆಲ್ಲಿ ಶಾಲೆಯ ಚೀನಾ ನ್ಯೂಇಯರ್ ರದ್ದು!

ಬೆಂಗಳೂರು ಡೆಲ್ಲಿ ಶಾಲೆಯ ಚೀನಾ ನ್ಯೂಇಯರ್ ರದ್ದು!

Aug 11, 2017 01:22:33 PM (IST)
ಬೆಂಗಳೂರು ಡೆಲ್ಲಿ ಶಾಲೆಯ ಚೀನಾ ನ್ಯೂಇಯರ್ ರದ್ದು!

ಬೆಂಗಳೂರು: ಒಂದೆಡೆ ಚೀನಾಗಡಿಯಲ್ಲಿ ಕಾಲು ಕೆರೆದು ಜಗಳಕ್ಕೆ ನಿಂತಿದ್ದರೆ ಮತ್ತೊಂದೆಡೆ ಬೆಂಗಳೂರಿನ ಪ್ರತಿಷ್ಟಿತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಇಂದು ಚೀನಾ ಹೊಸ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಭಾರೀ ವಿವಾದಕ್ಕೀಡಾಗಿದೆ.

ಡೆಲ್ಲಿ ಪಬ್ಲಿಕ್ ಶಾಲಾ ಆಡಳಿತ ಮಂಡಳಿಯು ಇಂದು ಚೀನಾದ ಹೊಸ ವಷರ್ಾಚರಣೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ ಸುತ್ತೋಲೆ ಮೂಲಕ ಚೀನಾದ ಫುಡ್ ಫೆಸ್ಟಿವಲ್ನಲ್ಲಿ ಮೋಮ್ಮಸ್, ಫ್ರೈಡ್ ರೈಸ್ ಸೇರಿದಂತೆ ನಾನಾ ಆಹಾರಗಳನ್ನು ವಿದ್ಯಾರ್ಥಿಗಳು ತಯಾರಿಸಲು ಸೂಚಿಸಲಾಗಿತ್ತು. ಜತೆಗೆ ಚೀನಾ ಬಟ್ಟೆ ಧರಿಸುವಂತೆ, ಒಂದು ವೇಳೆ ಇಲ್ಲದಿದ್ದರೆ ಕೆಂಪು ಬಟ್ಟೆ ಧರಿಸುವಂತೆ ಇನ್ನು ಚೀನಾ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವಂತೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು. ಅದರಂತೆ ವಿದ್ಯಾರ್ಥಿಗಳು ಚೀನಾ ಫೆಸ್ಟಿವಲ್ ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಈ ವಿಷಯ ತಿಳಿದು ಕೆಲ ಪೋಷಕರು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಈ ವಿಚಾರ ವಿವಾದಕ್ಕೆಡೆ ಮಾಡಿಕೊಟ್ಟಿದೆ. ಈ ಬಗ್ಗೆ ವಿದ್ಯಾರ್ಥಿಯ ಪೋಷಕರು, ಆಡಳಿತ ಮಂಡಳಿ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಗಡಿಯಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡಲು ತುದಿಗಾಲಲ್ಲಿ ನಿಂತಿದ್ದು, ಇಂತಹ ಸಂದರ್ಭದಲ್ಲಿ ಚೀನಾ ಹೊಸ ವರ್ಷ ಸಮಾರಂಭ ಹಮ್ಮಿಕೊಂಡಿರುವುದು ತಪ್ಪು. ಒಂದು ವೇಳೆ ಕಾರ್ಯಕ್ರಮ ನಡೆದರೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ಎಬಿವಿಪಿ ಎಚ್ಚರಿಸಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಉತ್ತರ ವಲಯದ ಬಿಇಒ ನಾರಾಯಣ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಚೀನಾ ನ್ಯೂ ಇಯರ್ ಕಾರ್ಯಕ್ರಮವನ್ನು ರದ್ದುಪಡಿಸುತ್ತೇವೆ. ಇದಕ್ಕೆ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ.