ಇನ್ನು ಮುಂದೆ ಭಾನುವಾರದಂದು ಮೆಟ್ರೋ ಬೆಳಿಗ್ಗೆ 7ಕ್ಕೆ ಸಂಚಾರ ಆರಂಭ

ಇನ್ನು ಮುಂದೆ ಭಾನುವಾರದಂದು ಮೆಟ್ರೋ ಬೆಳಿಗ್ಗೆ 7ಕ್ಕೆ ಸಂಚಾರ ಆರಂಭ

YK   ¦    Jan 12, 2019 05:09:05 PM (IST)
ಇನ್ನು ಮುಂದೆ ಭಾನುವಾರದಂದು ಮೆಟ್ರೋ ಬೆಳಿಗ್ಗೆ   7ಕ್ಕೆ ಸಂಚಾರ ಆರಂಭ

ಬೆಂಗಳೂರು:  ಮೆಟ್ರೊ ರೈಲು ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಂಚಾರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಇತರ ದಿನಗಳಲ್ಲಿ ಬೆಳಿಗ್ಗೆ 5.30 ಹಾಗೂ ಭಾನುವಾರ  ಬೆಳಿಗ್ಗೆ 8 ಕ್ಕೆ ಸಂಚಾರ ಆರಂಭವಾಗುತ್ತಿತ್ತು.

ಆದರೆ ಜನರ ಒತ್ತಾಯದ ಮೇರೆಗೆ ಹಾಗೂ ಪ್ರತಿಕ್ರಿಯೆ ಆಧಾರದಲ್ಲಿ ಇನ್ನು ಮುಂದೆ ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮುಂದೆ ಕಬ್ಬನ್ ಪಾರ್ಕ್, ಲಾಲ್ ಬಾಗ್ ಪಾರ್ಕ್ ಗೆ  ಬೇಗನೇ ಬರುವ ವಾಯುವಿಹಾರಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.