ನೆಲಮಂಗಲ ಪುರಸಭೆ ಪೌರಕಾರ್ಮಿಕರ ನೇಮಕಾತಿಗೆ ಹೈಕೋರ್ಟ್ ತಡೆ

ನೆಲಮಂಗಲ ಪುರಸಭೆ ಪೌರಕಾರ್ಮಿಕರ ನೇಮಕಾತಿಗೆ ಹೈಕೋರ್ಟ್ ತಡೆ

HSA   ¦    Dec 06, 2018 03:07:02 PM (IST)
ನೆಲಮಂಗಲ ಪುರಸಭೆ ಪೌರಕಾರ್ಮಿಕರ ನೇಮಕಾತಿಗೆ ಹೈಕೋರ್ಟ್ ತಡೆ

ಬೆಂಗಳೂರು: ಜಿಲ್ಲೆಯ ನೆಲಮಂಗಲ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 48 ಪೌರ ಕಾರ್ಮಿಕ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ಹೇರಿದೆ.

ಪುರಭಸಭೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಅಣ್ಣಮ್ಮ ಸಹಿತ ಸುಮಾರು 15 ಮಂದಿ ಪೌರ ಕಾರ್ಮಿಕರು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ತಡೆ ಹೇರಿದ್ದಾರೆ.

ಅರ್ಜಿದಾರರು 1990ರಿಂದ ಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇವರನ್ನು ಖಾಯಂಗೊಳಿಸದೆ, ಮತ್ತೆ ಏಕಾಏಕಿ ಹೊಸ ನೇಮಕಾತಿ ಮಾಡಿರುವುದು ಅನ್ಯಾಯವೆಸಗಿದಂತೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಈ ವಿಚಾರದಲ್ಲಿ ಸರ್ಕಾರವು ನ್ಯಾಯೋಚಿತವಾಗಿ ವರ್ತಿಸಬೇಕು ಎಂದು ಸರ್ಕಾರಿ ವಕೀಲರಿಗೆ ನ್ಯಾಯಾಧೀಶರು ಸೂಚಿಸಿದರು.