ಗೌರಿ ಹತ್ಯೆ ಪ್ರಕರಣ: ಕೊಡೈಕೆನಾಲ್‌, ಬೆಳಗಾವಿ, ಗೋವಾಗೆ ಎಸ್ ಐಟಿ ತಂಡ

ಗೌರಿ ಹತ್ಯೆ ಪ್ರಕರಣ: ಕೊಡೈಕೆನಾಲ್‌, ಬೆಳಗಾವಿ, ಗೋವಾಗೆ ಎಸ್ ಐಟಿ ತಂಡ

YK   ¦    Mar 11, 2018 11:53:00 AM (IST)
ಗೌರಿ ಹತ್ಯೆ ಪ್ರಕರಣ: ಕೊಡೈಕೆನಾಲ್‌, ಬೆಳಗಾವಿ, ಗೋವಾಗೆ ಎಸ್ ಐಟಿ ತಂಡ

ಬೆಂಗಳೂರು: ದೇಶದಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಎಸ್ಐಟಿ ಅಧಿಕಾರಿಗಳ ತಂಡವು ಭಾನುವಾರ ಕೊಡೈಕೆನಾಲ್‌, ಬೆಳಗಾವಿ ಹಾಗೂ ಗೋವಾಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

‘ಹತ್ಯೆಗೆ ಒಳಸಂಚು’ ರೂಪಿಸಿರುವ ಆರೋಪದಡಿ ಬಂಧಿಯಾಗಿರುವ ಆರೋಪಿಯಿಂದ ಹತ್ಯೆ ಸಂಬಂಧ ಮಾಹಿತಿ ಕಲೆ ಹಾಕಬೇಕಿದೆ.

ಈ ನಿಟ್ಟಿನಲ್ಲಿ ಕೊಡೈಕೆನಾಲ್‌, ಬೆಳಗಾವಿ ಹಾಗೂ ಗೋವಾದಲ್ಲಿ ನೆಲೆಸಿರುವ ಕೆಲ ವ್ಯಕ್ತಿಗಳೊಂದಿಗೆ ಆರೋಪಿ ಒಡನಾಟವಿದ್ದರಿಂದ ಅಲ್ಲಿಗೆ ಕರೆದೊಯ್ಯುವ ಸಾಧ್ಯತೆ ಹೆಚ್ಚಿವೆ ಎಂದು ತಿಳಿದು ಬಂದಿದೆ. ಆ ವ್ಯಕ್ತಿಗಳು ವಾಸವಿರುವ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ಯಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೂ ತಿಳಿಸಿ ಅನುಮತಿ ಪಡೆದಿದ್ದಾರೆ.