ಕಾಂಗ್ರೆಸ್ ನಿಂದ ದೂರವಾಗುತ್ತಿದ್ದಾರೆಯಾ ಸಿದ್ದರಾಮಯ್ಯ ಆಪ್ತರು?

ಕಾಂಗ್ರೆಸ್ ನಿಂದ ದೂರವಾಗುತ್ತಿದ್ದಾರೆಯಾ ಸಿದ್ದರಾಮಯ್ಯ ಆಪ್ತರು?

HSA   ¦    Jul 10, 2018 05:31:25 PM (IST)
ಕಾಂಗ್ರೆಸ್ ನಿಂದ ದೂರವಾಗುತ್ತಿದ್ದಾರೆಯಾ ಸಿದ್ದರಾಮಯ್ಯ ಆಪ್ತರು?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಎಚ್. ಸಿ. ಮಹದೇವಪ್ಪ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿಯು ಹಬ್ಬಿದ್ದು, ಇದು ಕಾಂಗ್ರೆಸ್ ನಲ್ಲಿ ತಲ್ಲಣ ಉಂಟು ಮಾಡಿದೆ.

ಹೀಗೆ ಆದಲ್ಲಿ ವಿ. ಶ್ರೀನಿವಾಸ್ ಪ್ರಸಾದ್ ಅವರ ಬಳಿಕ ಕಾಂಗ್ರೆಸ್ ನ್ನು ತ್ಯಜಿಸುತ್ತಿರುವ ಸಿದ್ದರಾಮಯ್ಯರ ಆಪ್ತರಲ್ಲಿ ಮಹದೇವಪ್ಪ ಎರಡನೇಯವರು.

2018ರ ಚುನಾವಣೆಯಲ್ಲಿ ಜೆಡಿಎಸ್ ನ ಎಂ.ಅಶ್ವಿನ್ ಕುಮಾರ್ ವಿರುದ್ಧ ಸೋಲುಂಡಿದ್ದ ಮಹದೇವಪ್ಪ ಅವರು ಪಕ್ಷದ ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಂಡಿಲ್ಲ.

ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಸೋತ ಅಭ್ಯರ್ಥಿಗಳ ಸಭೆ ನಡೆಸಲಾಗಿತ್ತು. ಆದರೆ ಇದಕ್ಕೂ ಮಹದೇವಪ್ಪ ಅವರು ಗೈರಾಗಿದ್ದರು. ಮಹದೇವಪ್ಪ ಅವರ ಆಪ್ತರ ಪ್ರಕಾರ ಕಾಂಗ್ರೆಸ್ ನಿಂದ ದೂರವಾಗುವುದು ಖಚಿತ ಎನ್ನಲಾಗುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರ ಜತೆ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗುತ್ತಿದೆ.