ಪ್ರಧಾನಿ ಮೋದಿ ಚಾಲೆಂಜ್ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ

ಪ್ರಧಾನಿ ಮೋದಿ ಚಾಲೆಂಜ್ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ

HSA   ¦    Jun 13, 2018 11:39:03 AM (IST)
ಪ್ರಧಾನಿ ಮೋದಿ ಚಾಲೆಂಜ್ ಸ್ವೀಕರಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಫಿಟ್ನೆಸ್ ಚಾಲೆಂಜ್ ನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ವೀಕರಿಸಿದ್ದಾರೆ.

ಕ್ರೀಡಾ ಸಚಿವ ಹಾಗೂ ಶೂಟರ್ ರಾಜ್ಯವರ್ಧನ್ ರಾಥೋಡ್ ಆರಂಭಿಸಿದ್ದ ಫಿಟ್ನೆಸ್ ಚಾಲೆಂಜ್ ನ್ನು ಟೀಂ ಇಂಡಿಯಾದ ನಾಯಕ ಕೊಹ್ಲಿ ಅವರು ಪ್ರಧಾನಿ ಮೋದಿ ಅವರಿಗೆ ಚಾಲೆಂಜ್ ಮಾಡಿದ್ದರು. ಇದನ್ನು ಸ್ವೀಕರಿಸಿದ್ದ ಮೋದಿ ಅವರು ತಮ್ಮ ಫಿಟ್ನೆಸ್ ನ ವೀಡಿಯೋ ಪೋಸ್ಟ್ ಮಾಡಿ ಅದನ್ನು ಕುಮಾರಸ್ವಾಮಿ ಅವರಿಗೆ ಪಾಸ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ ಡಿಕೆ, ಮೋದೀಜಿ, ನನ್ನ ಆರೋಗ್ಯದ ಕುರಿತಾಗಿ ಕಾಳಜಿ ಹೊಂದಿರುವುದಕ್ಕಾಗಿ ಧನ್ಯವಾದಗಳು. ಫಿಟ್ನೆಸ್ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯ. ನಾನು ಪ್ರತಿನಿತ್ಯ ಯೋಗ ಮತ್ತು ಥ್ರೆಡ್ ಮಿಲ್ ವ್ಯಾಯಾಮ ಮಾಡುತ್ತೇನೆ. ನನ್ನ ರಾಜ್ಯದ ಅಭಿವೃದ್ಧಿ ಮತ್ತು ಫಿಟ್ನೆಸ್ ಬಗ್ಗೆ ಕಾಳಜಿ ನನಗಿದೆ. ಇದಕ್ಕೆ ನಿಮ್ಮ ಸಹಕಾರ ಅಪೇಕ್ಷಿಸುತ್ತೇನೆ ಎಂದಿದ್ದಾರೆ.