ಬೆಂಗಳೂರಿನ ಸೈಬರ್ ಕೆಫೆನಲ್ಲಿ 10 ರೂ.ಗೆ ಟೆಕ್ಕಿ ಕೊಲೆ

ಬೆಂಗಳೂರಿನ ಸೈಬರ್ ಕೆಫೆನಲ್ಲಿ 10 ರೂ.ಗೆ ಟೆಕ್ಕಿ ಕೊಲೆ

YK   ¦    Sep 12, 2018 10:58:09 AM (IST)
ಬೆಂಗಳೂರಿನ ಸೈಬರ್ ಕೆಫೆನಲ್ಲಿ 10 ರೂ.ಗೆ ಟೆಕ್ಕಿ ಕೊಲೆ

ಬೆಂಗಳೂರು: 10 ರೂಪಾಯಿಗಾಗಿ ಸೈಬರ್ ಕೆಫೆ ನೌಕರ ಹಾಗೂ ಟೆಕ್ಕಿ ನಡುವೆ ಉಂಟಾದ ಜಗಳ ಟೆಕ್ಕಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗಿರಿನಗರದ ನಿವಾಸಿ ಗುರುಪ್ರಶಾಂತ್(31) ಎಂದು ಗುರುತಿಸಲಾಗಿದೆ.

ಆರೋಪಿ ಸೈಬರ್ ಕೆಫೆ ನೌಕರ ಕಾರ್ತಿಕ್ ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಬೆಳ್ಳಂದೂರಿನ ವಿಪ್ರೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಗುರುಪ್ರಶಾಂತ್ ಸೆ.6ರಂದು ರೆಸ್ಯೂಮ್ ಪ್ರಿಂಟ್ ತೆಗೆಯಲು ಸೈಬರ್ ಕೆಫೆಗೆ ತೆರಳಿದ್ದಾನೆ. ಈ ವೇಳೆ ಅಲ್ಲಿನ ನೌಕರ ಕಾರ್ತಿಕ್ ಬಳಿ ಇ-ಮೇಲ್ ನಲ್ಲಿದ್ದ ಕಲರ್ ಪ್ರಿಂಟ್ ತೆಗೆಸಿಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ 10 ರೂಪಾಯಿ ಕೇಳಿದ್ದಾರೆ. ಅದಕ್ಕೆ ಪ್ರಶಾಂತ್ 'ಕಪ್ಪು ಬಿಳುಪಿನ ಕಲರ್ ಪ್ರಿಂಟ್ ಗೂ ವ್ಯತ್ಯಸಾ ಇಲ್ಲವೆ' ಎಂದು ಪ್ರಶ್ನಿಸಿದ್ದಾನೆ. ಆ ಬಳಿಕ ಇಬ್ಬರ ನಡುವೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿ ಗುರುಪ್ರಶಾಂತ್ ನೌಕರ ಕಾರ್ತಿಕ್ ನ ಕೊರಳ ಪಟ್ಟಿ ಹಿಡಿದಿದ್ದಾನೆ.

ಇದದಿಂದ ಕೋಪಗೊಂಡ ಕಾರ್ತಿಕ್ ತನ್ನ ಪಕ್ಕದಲ್ಲಿದ್ದ ಸ್ಕ್ರೂ ಡೈವರ್ ನಲ್ಲಿ ಗುರುಪ್ರಶಾಂತ್ ಎಡಕಿವಿಗೆ ಚುಚ್ಚಿ ಹಲ್ಲೆ ನಡೆಸಿದ್ದಾನೆ. ಕೂಡಲೇ ಪ್ರಜ್ಞೆ ಕಳೆದುಕೊಂಡ ಬಿದ್ದ ಗುರುಪ್ರಸಾದ್ ನನ್ನು ರಾಧಾಕೃಷ್ಣ ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ರಕ್ತಸ್ರಾವಾದ ಹಿನ್ನೆಲೆ ಕೋಮಾಕ್ಕೆ ಜಾರಿದ್ದರು. ಆರೋಗ್ಯ ಗಂಭೀರವಾಗಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಗುರುಪ್ರಶಾಂತ್ ಕೊನೆಯುಸಿರೆಳೆದಿದ್ದಾರೆ. ಆದರೆ ದುರದೃಷ್ಟವೆಂದರೆ ಪತಿ ಮೃತಪಟ್ಟ ದಿನವೇ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮೃತ ಗುರುಪ್ರಶಾಂತ್ ಅವರು ಗಿರಿನಗರದಲ್ಲಿ ಮಮತಾ, ತಂದೆ ಹನುಮಂತರಾಯಪ್ಪ, ತಾಯಿ ಸಿದ್ದಗಂಗಮ್ಮ ಜತೆ ವವಾಸವಾಗಿದ್ದರು.