ಸೈನೈಡ್ ಮೋಹನ್ ಗಲ್ಲುಶಿಕ್ಷೆ ಆಜೀವ ಜೈಲು ಶಿಕ್ಷೆಗೆ ಪರಿವರ್ತನೆ

ಸೈನೈಡ್ ಮೋಹನ್ ಗಲ್ಲುಶಿಕ್ಷೆ ಆಜೀವ ಜೈಲು ಶಿಕ್ಷೆಗೆ ಪರಿವರ್ತನೆ

Oct 12, 2017 05:50:22 PM (IST)
ಸೈನೈಡ್ ಮೋಹನ್ ಗಲ್ಲುಶಿಕ್ಷೆ ಆಜೀವ ಜೈಲು ಶಿಕ್ಷೆಗೆ ಪರಿವರ್ತನೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸೈನೈಡ್ ಮೋಹನ್ ಗಲ್ಲುಶಿಕ್ಷೆಯನ್ನು ಹೈಕೋರ್ಟ್ ಆಜೀವ ಜೈಲು ಶಿಕ್ಷೆಯಾಗಿ ಪರಿವರ್ತಿಸಿದೆ. ಸೈನೈಡ್ ಮೋಹನ್ ಸಾಯುವವರೆಗೆ ಜೈಲಿನಲ್ಲಿರಬೇಕು ಎಂದು ಹೈಕೋರ್ಟ್ ಕಾರಾಗೃಹ ಅಧಿಕಾರಿಗಳಿಗೆ ಆದೇಶಿಸಿದೆ.

ಸೈನೈಡ್ ಮೋಹನ್ 2009ರಲ್ಲಿ ಬಂಟ್ವಾಳ ತಾಲೂಕಿನ ಕೋಳಿಮನೆ ಗ್ರಾಮದ ಅನಿತಾ ಎಂಬಾಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಹಾಸನಕ್ಕೆ ಕರೆತಂದು ಅತ್ಯಾಚಾರ ಮಾಡಿ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸೈನೈಡ್ ನೀಡಿ ಹತ್ಯೆಗೈದಿದ್ದ.

ಸೈನೈಡ್ ಮೋಹನ್ ಇದೇ ರೀತಿ 20 ಅಪರಾಧಗಳನ್ನು ಮಾಡಿದ್ದಾನೆ. ಇದರಲ್ಲಿ ನಾಲ್ಕು ಪ್ರಕರಣಗಳಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೂರು ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ.