ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್

YK   ¦    Apr 15, 2019 11:14:25 AM (IST)
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಫಸ್ಟ್, ಚಿತ್ರದುರ್ಗ ಲಾಸ್ಟ್

ಬೆಂಗಳೂರು: 2018-19ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

ದ್ವಿತೀಯ ಸ್ಥಾನವನ್ನು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೂರನೇ ಸ್ಥಾನವನ್ನು ಕೊಡಗು ಜಿಲ್ಲೆ ಪಡೆದುಕೊಂಡಿದೆ. ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈಯನ್ನು ಸಾಧಿಸಿದ್ದಾರೆ.

ಉಡುಪಿ ಜಿಲ್ಲೆ 92.20%, ದಕ್ಷಿಣ ಕನ್ನಡ ಜಿಲ್ಲೆ- 90.91%, ಕೊಡಗು 83.31 ಹಾಗೂ ಕೊನೆಯ ಸ್ಥಾನವನ್ನು ಪಡೆದ ಚಿತ್ರದುರ್ಗಾ ಜಿಲ್ಲೆಗೆ 55.42% ಅಂಕವನ್ನು ಪಡೆದುಕೊಂಡಿದೆ.