ಉಪ್ಪಿ ರಾಜಕೀಯ ಆಗಮನ- ಜನರ ಅಭಿಪ್ರಾಯ ಕೇಳಿದ ಬುದ್ಧಿವಂತ

ಉಪ್ಪಿ ರಾಜಕೀಯ ಆಗಮನ- ಜನರ ಅಭಿಪ್ರಾಯ ಕೇಳಿದ ಬುದ್ಧಿವಂತ

Aug 12, 2017 04:21:54 PM (IST)
ಉಪ್ಪಿ ರಾಜಕೀಯ ಆಗಮನ- ಜನರ ಅಭಿಪ್ರಾಯ ಕೇಳಿದ ಬುದ್ಧಿವಂತ

ಬೆಂಗಳೂರು: ರಾಜ್ಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ನಟ ಉಪೇಂದ್ರ ರಾಜಕೀಯ ಸೇರ್ಪಡೆ ವಿಚಾರದ ಕುರಿತಾಗಿ ನಟ ಉಪ್ಪಿ ಇಂದು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಅವರು ತಮ್ಮ ಕೆಲ ಚಿಂತನೆಗಳನ್ನು ಹಂಚಿಕೊಂಡರೆ ಹೊರತು, ಹೊಸ ಪಕ್ಷ ಕಟ್ಟುತಾರಾ ಅಥವಾ ಬೇರೆ ಪಕ್ಷವನ್ನು ಸೇರುತ್ತಾರ ಎಂಬುದರ ಸ್ಪಷ್ಟ ಸುಳಿವು ನೀಡಲಿಲ್ಲ.ತಮ್ಮ ರುಪ್ಪೀಸ್ ರೆಸಾರ್ಟ್ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಉಪ್ಪಿ, ಜನರು ಕಟ್ಟುವ ತೆರಿಗೆ ಪಾರದರ್ಶಕವಾಗಿರಬೇಕು. ರಾಜಕಾರಣಿಗಳಿಗೂ ಒಂದು ಅರ್ಹತೆ ಬೇಕು. ಕ್ವಾಲಿಫೀಕೇಶನ್ ಬೇಕು. ಪ್ರಸ್ತುತ ಜಾತಿ ಆಧಾರದ ಮೇಲೆ ವೋಟ್ ಮಾಡಲಾಗ್ತಿದೆ. ವೋಟ್ ಬ್ಯಾಂಕ್ ರಾಜಕೀಯ ನಮಗೆ ಬೇಡ. ಸ್ವಚ್ಛ ಭಾರತದಂತೆ ಸ್ವಚ್ಛ ಸರ್ಕಾರ ಸಮಾಜಕ್ಕೆ ಬೇಕಾಗಿದೆ ಎಂದರು.

ನಮಗೆ ಜನ ನಾಯಕರೂ ಬೇಡ, ಜನ ಸೇವಕರೂ ಬೇಡ, ನಮಗೆ ಕಾರ್ಮಿಕರು ಬೇಕು ಅದಕ್ಕಾಗಿ ಇಂದು ನಾನು ಖಾಕಿ ತೊಟ್ಟು ಬಂದಿದ್ದೇನೆ ಎಂದು ಉಪೇಂದ್ರ ಹೇಳಿದರು. ಜನರು ಅಸಾಮಾನ್ಯರು ಅವರಲ್ಲಿ ನೂರಾರು ಒಳ್ಳೆ ಒಳ್ಳೆ ಐಡಿಯಾಗಳಿರುತ್ತವೆ. ಇಂದು ಪ್ರಜಾಕಾರಣ ವೇದಿಕೆಯನ್ನು ನಿರ್ಮಿಸಿದ್ದು, ಈ ಮೂಲಕ ಜನರು ತಮ್ಮಲ್ಲಿರುವ ಐಡಿಯಾಗಳನ್ನು ಗಮನಕ್ಕೆ ತರಬಹುದುಆ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸಲಾಗುವುದು ಎಂದರು.