ಆನ್ ಲೈನ್ ನಲ್ಲಿ ಸಿಗಲಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರವೇಶ ಪತ್ರ

ಆನ್ ಲೈನ್ ನಲ್ಲಿ ಸಿಗಲಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರವೇಶ ಪತ್ರ

HSA   ¦    Feb 10, 2018 09:18:12 AM (IST)
ಆನ್ ಲೈನ್ ನಲ್ಲಿ ಸಿಗಲಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪ್ರವೇಶ ಪತ್ರ

ಬೆಂಗಳೂರು: ಈ ಸಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರವು ಆನ್ ಲೈನ್ ನಲ್ಲಿ ಮಾತ್ರ ದೊರೆಯುವಂತೆ ವ್ಯವಸ್ಥೆ ಮಾಡಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಇದರ ಜತೆಜತೆಗೆ ವಿದ್ಯಾರ್ಥಿಗಳ ಫಲಿತಾಂಶದ ಸಂದೇಶವನ್ನು ಅವರ ಪೋಷಕರ ಮೊಬೈಲ್ ಗೆ ರವಾನಿಸುವ ಬಗ್ಗೆ ಚಿಂತಿಸುತ್ತಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸುಮಾರು 8.54 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲರ ಪ್ರವೇಶ ಪತ್ರಗಳು ವಿದ್ಯಾರ್ಥಿ ಸಾಧನೆಯ ಟ್ರಾಕಿಂಘ್ ವ್ಯವಸ್ಥೆ ಜಾಲತಾಣ(ಎಸ್ಎಟಿಎಸ್)ಗೆ ಅಪ್ ಲೋಡ್ ಮಾಡಲಾಗಿದೆ.

ಆಯಾಆಯಾ ಶಾಲೆಯ ಮುಖ್ಯಶಿಕ್ಷಕರು ಇದನ್ನು ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಣೆ ಮಾಡಬಹುದು ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಮಾಹಿತಿ ನೀಡಿದ್ದಾರೆ.

ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇರಲಿದೆ. ನೋಂದಣಿ ಸಂಖ್ಯೆ, ಭಾವಚಿತ್ರ, ಲಿಂಗ, ಭಾಷಾ ವಿಷಯಗಳು, ಐಚ್ಛಿಕ ವಿಷಯಗಳು, ಹುಟ್ಟಿದ ದಿನಾಂಕ ಮೊದಲಾದವುಗಳು ಇರಲಿದೆ. ಇದರಲ್ಲಿ ಏನಾದರೂ ತಪ್ಪು ಇದ್ದರೆ ಫೆ.17ರ ಮೊದಲು ಮುಖ್ಯಶಿಕ್ಷಕರು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.