ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ನಡೆದರೇ ಎಸಿಪಿಗಳೇ ಹೊಣೆ: ಗೃಹಸಚಿವ ಪರಮೇಶ್ವರ್

ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ನಡೆದರೇ ಎಸಿಪಿಗಳೇ ಹೊಣೆ: ಗೃಹಸಚಿವ ಪರಮೇಶ್ವರ್

HSA   ¦    Sep 12, 2018 07:38:04 PM (IST)
ಗಣೇಶ ಹಬ್ಬದಲ್ಲಿ ಅಹಿತಕರ ಘಟನೆ ನಡೆದರೇ ಎಸಿಪಿಗಳೇ ಹೊಣೆ: ಗೃಹಸಚಿವ ಪರಮೇಶ್ವರ್

ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ, ಅದಕ್ಕೆ ಆಯಾ ವಲಯದ ಡಿಸಿಪಿ ಹಾಗೂ ಎಸಿಪಿಗಳನ್ನೇ‌ ನೇರ ಹೊಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಮೇಲ್ಮಟ್ಟ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬಕ್ಕೆ ಈಗಾಗಲೇ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ನಗರದಲ್ಲಿ ಎಸಿಪಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಬೇಕು. ಅಲ್ಲದೆ ಕಡ್ಡಾಯವಾಗಿ ಗಸ್ತು ಹೋಗುವಂತೆ ಎಸಿಪಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಗೂಂಡಾಕಾಯಿದೆ ಅಡಿಯಲ್ಲಿ ೧೪ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 3 ಪ್ರಕರಣ ಮಾದಕವಸ್ತು ಮಾರಾಟಗಾರರ ಮೇಲೆ ಹಾಕಲಾಗಿದೆ. ಅದೇರೀತಿ ಸರಗಳ್ಳರ ಮೇಲೂ ಗೂಂಡಾಕಾಯಿದೆ ಪ್ರಯೋಗಿಸಲಾಗಿದೆ ಎಂದು ಮಾಹಿತಿ ನೀಡಿದರು.