ಕಾಂಡೋಮ್ ಖರೀದಿಯಲ್ಲಿ ಕರ್ನಾಟಕವೇ ಮುಂದು...!

ಕಾಂಡೋಮ್ ಖರೀದಿಯಲ್ಲಿ ಕರ್ನಾಟಕವೇ ಮುಂದು...!

Nov 12, 2017 07:05:50 PM (IST)
ಕಾಂಡೋಮ್ ಖರೀದಿಯಲ್ಲಿ ಕರ್ನಾಟಕವೇ ಮುಂದು...!

ಬೆಂಗಳೂರು: ಆನ್ ಲೈನ್ ಮೂಲಕ ಉಚಿತವಾಗಿ ಸಿಗುತ್ತಿದ್ದ ಕಾಂಡೋಮ್ ಖರೀದಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಆನ್ ಲೈನ್ ಮೂಲಕ ಕೆಲವು ಎನ್ ಜಿಒ(ಸರ್ಕಾರೇತರ)ಗಳು ಹಾಗೂ ಸಂಸ್ಥೆಗಳು ಸುಮಾರು 5.14 ಲಕ್ಷದಷ್ಟು ಕಾಂಡೋಮ್ ಖರೀದಿ ಮಾಡಿವೆ. ಸುಮಾರು 4.41 ಲಕ್ಷದಷ್ಟು ಕಾಂಡೋಮ್ ಗಳನ್ನು ವೈಯಕ್ತಿವಾಗಿ ಖರೀದಿಸಲಾಗಿದೆ. ಇದರಲ್ಲಿ ಕರ್ನಾಟಕ ಮತ್ತು ದೆಹಲಿ ಮೊದಲು ಸ್ಥಾನದಲ್ಲಿದೆ. ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ 9.56 ಲಕ್ಷ ಕಾಂಡೋಮ್ ಗಳನ್ನು ಆನ್ ಲೈನ್ ನಲ್ಲಿ ಉಚಿತ ಮಾರಾಟಕ್ಕಿಟ್ಟಿತ್ತು.

ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್(ಎಚ್ ಎಲ್ ಎಲ್) ಸಹಭಾಗಿತ್ವದೊಂದಿಗೆ ಎಪ್ರಿಲ್ ಅಂತ್ಯದಲ್ಲಿ ಉಚಿತ ಕಾಂಡೋಮ್ ಮಾರಾಟ ಮಳಿಗೆ ತೆರೆಯಲಾಗಿತ್ತು. ಡಿಸೆಂಬರ್ ತನಕ ಸುಮಾರು 10 ಲಕ್ಷ ಕಾಂಡೋಮ್ ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಕಂಪೆನಿ ತಿಳಿಸಿದೆ.

ಮೆಡಿಕಲ್ ಅಥವಾ ಅಂಗಡಿಗೆ ಹೋಗಿ ಪುರುಷರು ಕಾಂಡೋಮ್ ಖರೀದಿಸಲು ಹಿಂದೇಟು ಹಾಕುವ ಕಾರಣ ಆನ್ ಲೈನ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.