ಸೈಕೋ ಜೈಶಂಕರ್ ಆತ್ಮಹತ್ಯೆ: ರಾಜ್ಯ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್

ಸೈಕೋ ಜೈಶಂಕರ್ ಆತ್ಮಹತ್ಯೆ: ರಾಜ್ಯ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್

HSA   ¦    Mar 10, 2018 04:35:11 PM (IST)
ಸೈಕೋ ಜೈಶಂಕರ್ ಆತ್ಮಹತ್ಯೆ: ರಾಜ್ಯ ಸರ್ಕಾರಕ್ಕೆ ಎನ್ ಎಚ್ ಆರ್ ಸಿ ನೋಟಿಸ್

ಬೆಂಗಳೂರು: ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸರಣಿ ಅತ್ಯಾಚಾರಿ, ಸೈಕೋ ಕಿಲ್ಲರ್ ಜೈಶಂಕರ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ) ನೋಟಿಸ್ ಜಾರಿಗೊಳಿಸಿದೆ.

ಜೈಶಂಕರ್ ಪ್ರಕರಣದಲ್ಲಿ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡಿರುವ ಎನ್ ಎಚ್ ಆರ್ ಸಿ, ಕರ್ನಾಟಕ ಬಂಧಿಖಾನೆ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.

ಜೈಲು ಸಿಬ್ಬಂದಿ ನಿರ್ಲಕ್ಷ್ಯದಿಂದ ಜೈಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾಧ್ಯಮಗಳ ವರದಿ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬಂಧಿಖಾನೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದೇವೆ. ಆರು ವಾರಗಳಲ್ಲಿ ವಿಸ್ತ್ರತ ವರದಿ ನೀಡುವಂತೆ ಪೊಲೀಸ್ ಮಹಾ ನಿರ್ದೇಶಕರಿಗೂ ನೋಟಿಸ್ ನೀಡಲಾಗಿದೆ ಎಂದು ಎನ್ ಎಚ್ ಆರ್ ಸಿ ತಿಳಿಸಿದೆ.