ಕುಡಿದ ಮತ್ತಿನಲ್ಲಿ ಪೊಲೀಸರ ನಡುವೆ ಗಲಾಟೆ: ಎಎಸ್ ಐಗೆ ಹಲ್ಲೆ

ಕುಡಿದ ಮತ್ತಿನಲ್ಲಿ ಪೊಲೀಸರ ನಡುವೆ ಗಲಾಟೆ: ಎಎಸ್ ಐಗೆ ಹಲ್ಲೆ

YK   ¦    Jul 11, 2018 05:09:00 PM (IST)
ಕುಡಿದ ಮತ್ತಿನಲ್ಲಿ ಪೊಲೀಸರ ನಡುವೆ ಗಲಾಟೆ: ಎಎಸ್ ಐಗೆ ಹಲ್ಲೆ

ಬೆಂಗಳೂರು: ಬನ್ನೇರುಘಟ್ಟ ರಸ್ತೆ ಅರಕೆರೆ ಗೇಟ್‌ ಬಳಿಯ ಎಂಪೈರ್ ಹೋಟೆಲ್‌ನಲ್ಲಿ ಕಳೆದ ಮಧ್ಯರಾತ್ರಿ ಪೊಲೀಸರೇ ಹೊಡೆದಾಟ ನಡೆಸಿ ಎಎಸ್ ಐ ಹಲ್ಲೆಗೊಳಗಾದ ಘಟನೆ ನಡೆದಿದೆ. ಹುಳಿಮಾವು ಪೊಲೀಸ್ ಪೇದೆಗಳ ಹೊಡೆತಕ್ಕೆ ಮೈಕೋ ಲೇಔಟ್‌ನ ಎಎಸ್ಐ ಹಲ್ಲೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಮಾಮೂಲಿ ವಿಚಾರಕ್ಕೆ ಪೊಲೀಸರ ನಡುವೆ ಶುರುವಾದ ಜಗಳವಾಗಿದ್ದು, ನಿನ್ನೆ ತಡ ರಾತ್ರಿ ಹೊಡೆದಾಡಿಕೊಂಡಿದ್ದಾರೆ. ಕುಡಿದು ಬಂದ ಹುಳಿಮಾವು ಪೊಲೀಸ್ ಠಾಣೆಯ ಇಬ್ಬರು ಕ್ರೈಂ ಪೇದೆಗಳು ಗಲಾಟೆ ಮಾಡಿದ್ದಾರೆ.

ಈ ವೇಳೆ ವಿಚಾರಣೆಗೆ ಬಂದ ಹೊಟೇಲ್ ನ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆಯೂ ಪೇದೆಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ, ಈ ಸಂಬಂಧ ಪೊಲೀಸರಿಗೆ ಹೊಟೇಲ್ ಸಿಬ್ಬಂದಿ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮೈಕೋ ಲೇಔಟ್‌ ಪೇದೆ ಎಎಸ್ಐ ಮೇಲೆಯೂ ಹಲ್ಲೆ ನಡೆಸಿದ್ದಾರೆ.