ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

HSA   ¦    Jan 09, 2019 11:30:29 AM (IST)
ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

ಬೆಂಗಳೂರು: ಚಿತ್ರನಟ ಯಶ್ ಹುಟ್ಟುಹಬ್ಬದ ದಿನವಾದ ಮಂಗಳವಾರ ಭೇಟಿಗೆ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ನಿನ್ನೆ ಯಶ್ ಮನೆಯ ಮುಂದೆ ರವಿ ಎಂಬಾತ ಬಂದು ಭೇಟಿಗೆ ಅವಕಾಶ ಕೇಳಿದ್ದ. ಆದರೆ ಅದಕ್ಕೆ ಅವಕಾಶ ನೀಡದ ಕಾರಣ ನೊಂದು ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ. ಚಿಂತಾಜನಕವಾಗಿದ್ದ ರವಿಯನ್ನು ನಿನ್ನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತ ಇಂದು ಮೃತಪಟ್ಟಿದ್ದಾನೆ ಎಂದು ವರದಿಗಳು ಹೇಳಿವೆ.

ಇಂತಹ ಕೃತ್ಯಗಳು ಮಾಡುವುದು ಅಭಿಮಾನವಲ್ಲ ಎಂದು ಘಟನೆ ಬಗ್ಗೆ ಯಶ್ ಪ್ರತಿಕ್ರಿಯಿಸಿದ್ದಾರೆ.