ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ

Jan 10, 2017 04:56:38 PM (IST)

ಬೆಂಗಳೂರು: ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ ಕರ್ನಾಟಕದ ಹೆಮ್ಮೆ (ಪ್ರೈಡ್ ಆಫ್ ಕರ್ನಾಟಕ) ಪ್ರಶಸ್ತಿಯನ್ನು  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಆರು ಮಂದಿ ಸಾಧಕರಿಗೆ ನೀಡಲಾಯಿತು.

ಆರ್.ವಿ, ಕನ್ಸ್ಟ್ರಕ್ಷನ್ ಪ್ರಾಯೋಜಿತ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ನಟಿ ಹಾಗೂ ಉದ್ಯಮಿ ಶಿಲ್ಪಾಶೆಟ್ಟಿ ಕುಂದ್ರಾಗೆ ಆರೋಗ್ಯ ಮತ್ತು ದೈಹಿಕ ದೃಢತೆಯ ವಿಭಾಗದಲ್ಲಿ, ಸೈಯದ್ ಕಿರ್ಮಾನಿಗೆ ಕ್ರೀಡಾ ವಿಭಾಗದಲ್ಲಿ, ಅರುಂಧತಿ ರಾಜಾ ಮತ್ತು ಜಗದೀಶ್ ರಾಜಾಗೆ ರಂಗಕರ್ಮದಲ್ಲಿ, ಸುಪರ್ಣಾ ಗಂಗೂಲಿಗೆ ಸಮಾಜ ಸೇವೆಗಾಗಿ, ಮನರಂಜನೆ ಕ್ಷೇತ್ರದಲ್ಲಿ ದಾನೀಶ್ ಸೇಠ್ಗೆ ಮತ್ತು ಕಲಾಕ್ಷೇತ್ರದಲ್ಲಿ ಬಿ.ಕೆ.ಎಸ್. ವರ್ಮಾಗೆ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಮೀನಾ ಗಣೇಶ್ಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಸಂಸ್ಥೆಯು ಹಲವು ವರ್ಷಗಳಿಂದ ಅಸಾಧಾರಣ ಕಾರ್ಯ ಕೈಗೊಂಡು ಕರ್ನಾಟಕಕ್ಕೆ ಹೆಮ್ಮೆ ತಂದಿರುವ ಗಣ್ಯರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಏಳು ವರ್ಷಗಳಿಂದ ಮಾಡಿಕೊಂಡು ಬಂದಿದೆ ಎಂದು ರೌಂಡ್ ಟೇಬಲ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಮನ್ಪ್ರೀತ್ ಸಿಂಗ್ ರಾಜ ಹೇಳಿದರು.