ಸರದಿಯಲ್ಲಿ ಉಪವಾಸ ಕೂರಲಿದ್ದಾರೆ ಖಾಸಗಿ ವೈದ್ಯರು

ಸರದಿಯಲ್ಲಿ ಉಪವಾಸ ಕೂರಲಿದ್ದಾರೆ ಖಾಸಗಿ ವೈದ್ಯರು

Nov 14, 2017 11:42:34 AM (IST)
ಸರದಿಯಲ್ಲಿ ಉಪವಾಸ ಕೂರಲಿದ್ದಾರೆ ಖಾಸಗಿ ವೈದ್ಯರು

ಬೆಂಗಳೂರು: ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಮಸೂದೆ ಬಗ್ಗೆ ವೈದ್ಯಕೀಯ ಸಂಘ ಮತ್ತು ಮುಖ್ಯಮಂತ್ರಿಗಳ ಮಾತುಕತೆ ಸೋಮವಾರ ವಿಫಲವಾಗಿದ್ದು, ಮಂಗಳವಾರದಿಂದ ವೈದ್ಯರು ಸರದಿ ಉಪವಾಸ ನಡೆಯಲು ಮುಂದಾಗಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆ ಮಸೂದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿಯೇ ಒಡಕು ಮೂಡಿದೆ. ಮಸೂದೆಯನ್ನು ಮಂಡಿಸದಂತೆ ಮುಖ್ಯಮಂತ್ರಿಗಳ ಮೇಲೆ ಕೆಲವು ಶಾಸಕರು ಹಾಗೂ ಸಚಿವರು ಒತ್ತಡ ಹೇರುತ್ತಿದ್ದಾರೆ. ಆದರೆ ಇನ್ನು ಕೆಲವು ಶಾಸಕರು ಹಾಗೂ ಸಚಿವರು ಇದನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಸೂದೆಯು ಬಡವರಿಗೆ ನೆರವಾಗುವ ಕಾರಣದಿಂದ ಇದನ್ನು ಮಂಡಿಸಬೇಕು ಎಂದು ಒಂದು ಬಣವು ಒತ್ತಾಯಿಸಿದರೆ. ಇದು ಮುಂದಿನ ಚುನಾವಣೆಯಲ್ಲಿ ತಿರುಗುಬಾಣವಾಗಬಹುದು ಎಂದು ಇನ್ನೊಂದು ಬಣವು ಅಭಿಪ್ರಾಯಪಟ್ಟಿದೆ.

ಇದರ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನ.15(ನಾಳೆ) ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.