ಸಿಎಂ ಕ್ಷಮೆಕೇಳದಿದ್ದರೆ `ನಾನು ಬಿಜೆಪಿ, ನಾನು ಆರ್ ಎಸ್ಎಸ್' ಪ್ರತಿಭಟನೆ: ಕರಂದ್ಲಾಜೆ

ಸಿಎಂ ಕ್ಷಮೆಕೇಳದಿದ್ದರೆ `ನಾನು ಬಿಜೆಪಿ, ನಾನು ಆರ್ ಎಸ್ಎಸ್' ಪ್ರತಿಭಟನೆ: ಕರಂದ್ಲಾಜೆ

HSA   ¦    Jan 11, 2018 03:33:45 PM (IST)
ಸಿಎಂ ಕ್ಷಮೆಕೇಳದಿದ್ದರೆ `ನಾನು ಬಿಜೆಪಿ, ನಾನು ಆರ್ ಎಸ್ಎಸ್' ಪ್ರತಿಭಟನೆ: ಕರಂದ್ಲಾಜೆ

ಬೆಂಗಳೂರು: ಬಿಜೆಪಿಯವರು ಉಗ್ರಗಾಮಿಗಳು ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಕ್ಷಮೆ ಕೇಳದೇ ಇದ್ದಲ್ಲಿ ನಾನು ಬಿಜೆಪಿ, ನಾನು ಆರ್ ಎಸ್ ಎಸ್ ಎಂಬ ಘೋಷಣೆಯೊಂದಿಗೆ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಎಚ್ಚರಿಸಿದರು.

ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರು ಉಗ್ರಗಾಮಿಗಳು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕ್ಷಮೆಯಾಚಿಸದೆ ಇದ್ದರೆ ಈ ರೀತಿ ಪ್ರತಿಭಟನೆ ನಡೆಸಿ ಜೈಲ್ ಭರೋ ಚಳುವಳಿ ಆರಂಭಿಸುತ್ತೇವೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ತಿಳಿಸಿದರು.

ಪಿಎಫ್ ಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಉಗ್ರರನ್ನು ಪೋಷಿಸುತ್ತಿದೆ. ನಮ್ಮನ್ನು ಉಗ್ರಗಾಮಿಗಳು ಎಂದು ಹೇಳಿರುವ ಸಿಎಂ ತಾಕತ್ತಿದ್ದರೆ ನಮ್ಮನ್ನೆಲ್ಲ ಬಂಧಿಸಲಿ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿಗಳ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಅವರು ಯೂಟರ್ನ್ ಹೊಡೆದಿದ್ದರು.