ಖಾಲಿ ಅಂಕಪಟ್ಟಿ ಖರೀದಿಯಲ್ಲಿ ಭಾರೀ ಅವ್ಯವಹಾರ!

ಖಾಲಿ ಅಂಕಪಟ್ಟಿ ಖರೀದಿಯಲ್ಲಿ ಭಾರೀ ಅವ್ಯವಹಾರ!

HSA   ¦    Dec 06, 2017 02:53:31 PM (IST)
ಖಾಲಿ ಅಂಕಪಟ್ಟಿ ಖರೀದಿಯಲ್ಲಿ ಭಾರೀ ಅವ್ಯವಹಾರ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವಂತಹ ಬಸವರಾಜ ರಾಯರೆಡ್ಡಿ ಅವರು ವಿವಿಧ ವಿಶ್ವವಿದ್ಯಾನಿಲಯಗಳಿಗೆ ಖಾಲಿ ಅಂಕಪಟ್ಟಿ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಕಾಂಗ್ರೆಸ್ ನದ್ದೇ ವಿದ್ಯಾರ್ಥಿ ಸಂಘಟನೆಯು ಆರೋಪ ಮಾಡಿದೆ.

ಸಂಸ್ಥೆಯೊಂದಕ್ಕೆ ಲಾಭ ಮಾಡುವ ಉದ್ದೇಶದಿಂದ ಖಾಲಿ ಅಂಕಪಟ್ಟಿಯನ್ನು ಹೆಚ್ಚಿನ ಬೆಲೆಗೆ ಖರೀದಿ ಮಾಡಲು ರಾಯರೆಡ್ಡಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿಗಳ ವಿಭಾಗ ನ್ಯಾಶನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ ಎಸ್ ಯುಐ) ಆರೋಪಿಸಿದೆ.

ಖಾಲಿ ಅಂಕಪಟ್ಟಿ ಖರೀದಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ರಾಜ್ಯ ಉಸ್ತುವಾರಿಯಾಗಿರುವ ಕೆ.ವಿ. ವೇಣುಗೋಪಾಲ್ ಅವರಿಗೆ ಎನ್ ಎಸ್ ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್. ಎಸ್. ಮಂಜುನಾಥ್ ಅವರು ಮನವಿ ಸಲ್ಲಿಸಿದ್ದರು.

ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಗೆ ಮುಂಬಯಿಯ ಮಾರಾಟಗಾರರಿಂದ ಖಾಲಿ ಅಂಕಪಟ್ಟಿ ಖರೀದಿಸುವಂತೆ ಒತ್ತಡ ಹೇರಲಾಗಿತ್ತು. ಇದು ಟೆಂಡರ್ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.