ಮಾವಿನ ಕಾಯಿ ಕೀಳಲು ಮರಕ್ಕೆ ಹತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್: ಸಾವು

ಮಾವಿನ ಕಾಯಿ ಕೀಳಲು ಮರಕ್ಕೆ ಹತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್: ಸಾವು

YK   ¦    Apr 15, 2019 10:11:05 AM (IST)
ಮಾವಿನ ಕಾಯಿ ಕೀಳಲು ಮರಕ್ಕೆ ಹತ್ತಿದ್ದ ಬಾಲಕನಿಗೆ ಕರೆಂಟ್ ಶಾಕ್: ಸಾವು

ಬೆಂಗಳೂರು: ಜೀವನ್ ಬಿಮಾನಗರದ ಕೇಂದ್ರೀಯ ವಿದ್ಯಾಲಯ ಕ್ವಾಟರ್ಸ್ ಆವರಣದಲ್ಲಿ ಮಾವಿನ ಕಾಯಿಯನ್ನು ಕೀಳಲು ಮರಕ್ಕೆ ಹತ್ತಿದ್ದ ಬಾಲಕನಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಮೃತ ಬಾಲಕನನ್ನು ಭರತ್(13) ಎಂದು ಗುರುತಿಸಲಾಗಿದೆ.

ಕೂಡಲೇ ಆತನನ್ನು ಸ್ಥಳೀಯರು ಸಿಎಂಎಚ್ ಆಸ್ಪತ್ರೆಗೆ ಕರೆದುಕೊಂಡು ಹೋದರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ.

ಈ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ(ಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.