ಸರ್ಕಾರ ಉರುಳಿಸಲು ಮಾಫಿಯಾಗಳ ಕಸರತ್ತು: ಕುಮಾರಸ್ವಾಮಿ

ಸರ್ಕಾರ ಉರುಳಿಸಲು ಮಾಫಿಯಾಗಳ ಕಸರತ್ತು: ಕುಮಾರಸ್ವಾಮಿ

HSA   ¦    Sep 14, 2018 04:25:38 PM (IST)
ಸರ್ಕಾರ ಉರುಳಿಸಲು ಮಾಫಿಯಾಗಳ ಕಸರತ್ತು: ಕುಮಾರಸ್ವಾಮಿ

ಬೆಂಗಳೂರು: ಕೆಲವೊಂದು ಮಾಫಿಯಾಗಳು ಜತೆಯಾಗಿ ಸೇರಿಕೊಂಡು ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಟರ್ ಬಡ್ಡಿ, ರಿಯಲ್ ಎಸ್ಟೇಟ್, ಇಸ್ಪೀಟ್ ದಂಧೆ ನಡೆಸುವ ಮಾಫಿಯಾವು ಸರ್ಕಾರ ಉರುಳಿಸಲು ದೊಡ್ಡ ಮಟ್ಟದ ಸಂಚು ರೂಪಿಸಿದೆ. ಆದರೆ ನಾನು ಇದರ ವಿರುದ್ಧ ಕಾನೂನು ಪ್ರಕಾರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ ಎಂದರು.

ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿರುವಂತಹ ಘಟನೆಗಳು ನನಗೆ ತಿಳಿದಿದೆ. ಆದರೆ ನಾನು ಇದರ ಬಗ್ಗೆ ಸುಮ್ಮನೆ ಕುಳಿತುಕೊಂಡಿಲ್ಲ. ಎಲ್ಲಿ ಹಣ ಸಂಗ್ರವಾಗುತ್ತಿದೆ. ಯಾರ್ಯಾರು ಇದರಲ್ಲಿ ಇದ್ದಾರೆ ಎಂದು ನನಗೆ ಚೆನ್ನಾಗಿ ತಿಳಿದಿದೆ ಎಂದು ತಿಳಿಸಿದರು.