ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ವಾಚ್ ಮನ್ ಸಾವು, ಇಬ್ಬರು ಗಂಭೀರ

ಬೆಂಗಳೂರಿನಲ್ಲಿ ಕಟ್ಟಡ ಕುಸಿತ: ವಾಚ್ ಮನ್ ಸಾವು, ಇಬ್ಬರು ಗಂಭೀರ

Oct 05, 2016 06:35:05 PM (IST)

ಬೆಂಗಳೂರು: ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದುಬಿದ್ದು, ಒಬ್ಬ ವಾಚ್ ಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಂಗಳೂರಿನ ಬೆಳ್ಳಂದೂರು ಗೇಟ್ ಬಳಿ ನಡೆದಿದೆ.

ಎಂಟು ವರ್ಷದ ಬಾಲಕ ಸೇರಿದಂತೆ ನಾಲ್ವರನ್ನು ಈಗಾಗಲಲೇ ರಕ್ಷಿಸಲಾಗಿದ್ದು, ಅವಶೇಷಗಳಡಿ ಇನ್ನೂ ನಾಲ್ವರು ಸಿಲುಕಿಕೊಂಡಿರಬಹುದು ಎಂದು ಪ್ರತ್ಯಕ್ಷದಕ್ಷಿಗಳು ಹೇಳಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಐದು ಅಗ್ನಿ ಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಬಂದಿವೆ.

ಕಟ್ಟಡದಲ್ಲಿ 20ಕ್ಕೂ ಅಧಿಕ ಕಾರ್ಮಿಕರು ಇದ್ದರು ಎಂದು ಪ್ರಾಥಮಿಕ ಮಾಹಿತಿ ಪ್ರಕಾರ ತಿಳಿದುಬಂದಿದ್ದು, ನಾಲ್ಕು ಮಂದಿಯನ್ನು ರಕ್ಷಿಸಲಾಗಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದು, ಕಟ್ಟಡದ ಮಾಲೀಕತ್ವದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ ಹಾಗೂ ದೊಡ್ಡ ಸ್ಫೋಟದ ಶಬ್ದ ಕಟ್ಟಡ ಕುಸಿಯುವುದಕ್ಕೂ ಮೊದಲು ಕೇಳಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಈ ಕಟ್ಟಡ ಕುಸಿತದ ಪರಿಣಾಮ ಹತ್ತಿರದಲ್ಲೇ ಇದ್ದ ಕಟ್ಟಡಕ್ಕೂ ಹಾನಿಯಾಗಿದೆ.