ಉಪಚುನಾವಣೆ: ಮೈತ್ರಿ ಸರ್ಕಾರಕ್ಕೆ ದೀಪಾವಳಿ ಬೋನಸ್

ಉಪಚುನಾವಣೆ: ಮೈತ್ರಿ ಸರ್ಕಾರಕ್ಕೆ ದೀಪಾವಳಿ ಬೋನಸ್

YK   ¦    Nov 06, 2018 03:16:07 PM (IST)
ಉಪಚುನಾವಣೆ: ಮೈತ್ರಿ ಸರ್ಕಾರಕ್ಕೆ ದೀಪಾವಳಿ ಬೋನಸ್

ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕೇತ್ರಗಳ ಉಪಚುನಾಣೆಯಲ್ಲಿ ಮೈತ್ರಿ ಸರ್ಕಾರವು ಮತದಾರರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಒಟ್ಟು ಪಂಚ ಕ್ಷೇತ್ರಗಳ ಚುನಾಣೆಯಲ್ಲಿ ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ, ಜೆಡಿಎಸ್ 2ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 1 ಕ್ಷೇತ್ರದಲ್ಲಿ ಜಯವನ್ನು ಸಾಧಿಸಿದೆ.

ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ದಾಖಲೆಯ ಅಂತರದ ಗೆಲುವನ್ನು ಪಡೆದುಕೊಂಡಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೊರಗಿನ ವಿ.ಎಸ್. ಉಗ್ರಪ್ಪ ಅವರು ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ವಿರುದ್ಧ ಅಂತರದ ಕೆಲುವನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಬಳ್ಳಾರಿ ಉಗ್ರಪ್ಪ ಅವರಿಗೆ ಒಲಿದು ಬಂದಿದೆ.

ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ ಜಯಗಳಿಸುವ ಮೂಲಕ ಪಂಚ ಕ್ಷೇತ್ರಗಳ ಉಪಚುನಾಣೆಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಕಾಪಾಡಿಕೊಂಡಿದೆ.

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್. ಆರ್ ಶಿವರಾಮೆ ಗೌಡ ಅವರು ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ವಿರುದ್ಧ ಗೆಲುವು ಪಡೆದುಕೊಂಡಿದ್ದಾರೆ.

ಜಮ್ಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರು ಜಯಭೇರಿಯಾಗಿದ್ದಾರೆ.