ಎಚ್ ಎಎಲ್ ನೌಕರರ ಜತೆ ರಾಹುಲ್ ಸಂವಾದಕ್ಕೆ ಅನುಮತಿ ನಿರಾಕರಣೆ

ಎಚ್ ಎಎಲ್ ನೌಕರರ ಜತೆ ರಾಹುಲ್ ಸಂವಾದಕ್ಕೆ ಅನುಮತಿ ನಿರಾಕರಣೆ

HSA   ¦    Oct 11, 2018 03:53:40 PM (IST)
ಎಚ್ ಎಎಲ್ ನೌಕರರ ಜತೆ ರಾಹುಲ್ ಸಂವಾದಕ್ಕೆ ಅನುಮತಿ ನಿರಾಕರಣೆ

ಬೆಂಗಳೂರು: ರಫೇಲ್ ಡೀಲ್ ಬಗ್ಗೆ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಎಚ್ ಎಎಲ್) ನೌಕರರ ಬಳಿ ಸಂವಾದಕ್ಕೆ ಮುಂದಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಿನ್ನಡೆಯಾಗಿದೆ.

ಅ.13ರಂದು ಎಚ್ ಎಎಲ್ ನೌಕರರೊಂದಿಗೆ ರಫೇಲ್ ಡೀಲ್ ಬಗ್ಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದರು. ಆದರೆ ಎಚ್ ಎಎಲ್ ಇದಕ್ಕೆ ಅನುಮತಿ ನಿರಾಕರಿಸಿದೆ.

ಎಚ್ ಎಎಲ್ ನಲ್ಲಿ ಸಂವಾದ ಸಹಿತ ಮುಂಬರುವ ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗಳ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಚರ್ಚೆ ನಡೆಸಿದ್ದರು.

ಎಚ್ ಎಎಲ್ ಸಂಸ್ಥೆಯು ಕೇಂದ್ರ ಸರ್ಕಾರ ಅಧೀನದಲ್ಲಿರುವ ಕಾರಣದಿಂದಾಗಿ ರಾಹುಲ್ ಗೆ ಇದರ ಆವರಣದಲ್ಲಿ ಸಂವಾದ ನಡೆಸಲು ಅನುಮತಿ ನೀಡದಿರಲು ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ತಿಳಿದುಬಂದಿದೆ.