ಪಾರಿವಾಳ ಬಿಟ್ಟದಕ್ಕೆ ಎರಡು ವರ್ಷದ ಮಗುವನ್ನು ಕೊಂದೇ ಬಿಟ್ಟ!

ಪಾರಿವಾಳ ಬಿಟ್ಟದಕ್ಕೆ ಎರಡು ವರ್ಷದ ಮಗುವನ್ನು ಕೊಂದೇ ಬಿಟ್ಟ!

HSA   ¦    Feb 09, 2018 11:52:23 AM (IST)
ಪಾರಿವಾಳ ಬಿಟ್ಟದಕ್ಕೆ ಎರಡು ವರ್ಷದ ಮಗುವನ್ನು ಕೊಂದೇ ಬಿಟ್ಟ!

ಬೆಂಗಳೂರು: ತಾನು ಸಾಕಿದ್ದ ಪಾರಿವಾಳವನ್ನು ಬಿಟ್ಟುಬಿಟ್ಟನೆಂಬ ಕ್ಷುಲ್ಲಕ ಕಾರಣಕ್ಕಾಗಿ 15ರ ಹರೆಯದ ಬಾಲಕನೊಬ್ಬ ಕೋಪಗೊಂಡು ಎರಡು ವರ್ಷದ ಮಗುವನ್ನು ಕೊಂದ ಘಟನೆಯು ಸೋಲದೇವನಹಳ್ಳಿಯಲ್ಲಿ ನಡೆದಿದೆ.

8ನೇ ತರಗತಿಯ್ಲಿ ಓದುತ್ತಿದ್ದ 15ರ ಹರೆಯದ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೀಲಗಿರಿ ತೋಟದಲ್ಲಿ ಎರಡು ವರ್ಷದ ವೆಂಕಟೇಶ್ ಎಂಬ ಮಗುವನ್ನು 15ರ ಬಾಲಕ ಕೊಂದು ಹಾಕಿದ್ದಾನೆ.

ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ಪಾರಿವಾಳ ಸಾಕಿದ್ದ. ಅದನ್ನು ವೆಂಕಟೇಶ್ ಬಿಟ್ಟುಬಿಟ್ಟಿದ್ದಾನೆಂದು ಕ್ರೋಧಗೊಂಡು ಕೊಲೆ ಮಾಡಿರುವುದಾಗಿ ಬಾಲಕ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಬಸವರಾಜ್ ಮತ್ತು ಯಂಕಮ್ಮ ದಂಪತಿ ಮಗುವಾಗಿದ್ದ ವೆಂಕಟೇಶ್ ಬುಧವಾರ ಸಾಯಂಕಾಲ ಕೊಲೆಗೀಡಾಗಿದ್ದಾನೆ. ಮಗು ಕೊನೆಯ ಬಾಲಕನೊಂದಿಗೆ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದರು.