ಸಿದ್ದರಾಮಯ್ಯ ಮನೆ ಪಕ್ಕಾ ಸತ್ಯಹರಿಶ್ಚಂದ್ರ ಹಾದು ಹೋಗಿದ್ದಾರಾ?

ಸಿದ್ದರಾಮಯ್ಯ ಮನೆ ಪಕ್ಕಾ ಸತ್ಯಹರಿಶ್ಚಂದ್ರ ಹಾದು ಹೋಗಿದ್ದಾರಾ?

HSA   ¦    Feb 10, 2018 05:35:06 PM (IST)
ಸಿದ್ದರಾಮಯ್ಯ ಮನೆ ಪಕ್ಕಾ ಸತ್ಯಹರಿಶ್ಚಂದ್ರ ಹಾದು ಹೋಗಿದ್ದಾರಾ?

ಬೆಂಗಳೂರು: ಸೋನಿಯಾ ಗಾಂಧಿ ಅವರ ಬಲ ಕುಗ್ಗಿದೆ. ಇದರಿಂದಾಗಿ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇನ್ನೇನಿದ್ದರೂ 120 ದಿನ ಮಾತ್ರ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಹಿಂದೆ ರಾಜ್ಯದಲ್ಲಿ ಜನರ ಮನಸ್ಸು ಗೆಲ್ಲುವಾಗ ದೇವೇಗೌಡ ಬೇಕಾಗಿದ್ದ. ಮುಖ್ಯಮಂತ್ರಿಯಾದ ಬಳಿಕ ಶ್ರವಣಬೆಳಗೊಳದ ಕಾರ್ಯಕ್ರಮದಲ್ಲಿ ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ ಎಂದು ಕೆಂಗೇರಿ ಉಪನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ದೇವೇಗೌಡರು ತನ್ನ ನೋವು ತೋಡಿಕೊಂಡರು.

ನಿಮ್ಮ ಅಧಿಕಾರ ಎಷ್ಟು ದಿನ ಎನ್ನುವುದನ್ನು ನಾನು ನೋಡುತ್ತೇನೆ. ನಿಮ್ಮ ಕಾರ್ಯಗಳ ಬಗ್ಗೆ ಅಂಕಿಅಂಶ ಇಟ್ಟುಕೊಂಡು ಮಾತನಾಡುತ್ತೇನೆ. ನೀವು ರಾಜ್ಯವನ್ನು ಲೂಟಿ ಮಾಡ್ತಾ ಇದ್ದೀರಾ? ನಿಮ್ಮ ಟೈಂ ಮುಗೀತಾ ಬಂತಲ್ಲಪ್ಪ ಎಂದರು.

ಸಿದ್ದರಾಮಯ್ಯ ಕೈ ಎತ್ತಿ ಎತ್ತಿ ಭಾಷಣ ಮಾಡುವುದನ್ನು ನೋಡಿದ್ದೇನೆ. ಸಿದ್ದರಾಮಯ್ಯ ಮಾತ್ರ ಒಬ್ಬರೇ ಸತ್ಯವಂತರೇ? ಅವರ ಮನೆ ಪಕ್ಕ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದಾರಾ ಎಂದು ದೇವೇಗೌಡರು ಚಾಟಿ ಬೀಸಿದರು.