ಸೋಮವಾರ ಕುಮಾರಸ್ವಾಮಿ ಡೀಲ್ ಆಡಿಯೋ ಬಿಡುಗಡೆ: ಲಿಂಬಾವಳಿ

ಸೋಮವಾರ ಕುಮಾರಸ್ವಾಮಿ ಡೀಲ್ ಆಡಿಯೋ ಬಿಡುಗಡೆ: ಲಿಂಬಾವಳಿ

HSA   ¦    Feb 09, 2019 04:00:19 PM (IST)
ಸೋಮವಾರ ಕುಮಾರಸ್ವಾಮಿ ಡೀಲ್ ಆಡಿಯೋ ಬಿಡುಗಡೆ: ಲಿಂಬಾವಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈಹಾಕಿದ್ದಾರೆ ಎನ್ನುವ ಆಡಿಯೋ ಬಿಡುಗಡೆಯಾದ ಬೆನ್ನಲ್ಲೇ ಸೋಮವಾರ ಎಚ್.ಡಿ.ಕುಮಾರಸ್ವಾಮಿ ಆಡಿಯೋ ಸದನದಲ್ಲಿ ಬಿಡುಗಡೆಯಾಗಲಿದೆ ಎಂದು ಬಿಜೆಪಿ ನಾಯಕರು ತಿಳಿಸಿರುವರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯವರಿಗೆ ಮಾಡಿರುವ ಸುಮಾರು 25 ಕೋಟಿ ರೂಪಾಯಿ ಆಫರ್ ನ ವಿಡಿಯೋವನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹೇಳಿದರು.

ಗುರುಮಿಠಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣುಗೌಡ ಕಂದಕೂರ್ ಅವರಿಗೆ ದೂರವಾಣಿ ಮುಖಾಂತರ 25 ಕೋಟಿ ರು., ಯಾದಗಿರಿ ಜಿಲ್ಲಾ ಉಸ್ತುವಾರಿ ಹಾಗೂ ಪ್ರಮುಖ ಖಾತೆ ನೀಡುವುದಾಗಿ ಯಡಿಯೂರಪ್ಪ ಆಮಿಷ ಒಡ್ಡಿದ್ದರು ಎನ್ನಲಾದ ಆಡಿಯೋ ಬಿಡುಗಡೆ ಮಾಡಲಾಗಿತ್ತು.

ಕುಮಾರಸ್ವಾಮಿ ಬಿಡುಗಡೆ ಮಾಡಿರುವಂತಹ ಆಡಿಯೋ ನಕಲಿ. ನಮ್ಮ ಶಾಸಕರಿಗೆ ಆಮಿಷ ಒಡ್ಡಿರುವಂತಹ ವಿಡಿಯೋ ನಮ್ಮಲ್ಲಿ ಇದೆ. ಇದನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಲಿಂಬಾವಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.