ಆಧಾರ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ: ನಂದನ್ ನಿಲೇಕಣಿ

ಆಧಾರ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ: ನಂದನ್ ನಿಲೇಕಣಿ

HSA   ¦    Jan 11, 2018 01:56:35 PM (IST)
ಆಧಾರ್ ವಿರುದ್ಧ ದುರುದ್ದೇಶಪೂರಿತ ಪ್ರಚಾರ: ನಂದನ್ ನಿಲೇಕಣಿ

ಬೆಂಗಳೂರು: ಆಧಾರ್ ವಿರುದ್ಧ ವ್ಯವಸ್ಥಿತವಾಗಿ ದುರುದ್ದೇಶದಿಂದ ಪ್ರಚಾರ ನಡೆಸಲಾಗುತ್ತಿದೆ ಎಂದು ಯುಐಎಡಿಐ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ.

ಆಧಾರ್ ದುರ್ಬಳಕೆ ಮಾಡಿಕೊಳ್ಳಲು ಕೆಲವೊಂದು ಹಿತಾಸಕ್ತಿಗಳು ದುರುದ್ದೇಶದಿಂದ ಪ್ರಚಾರ ನಡೆಸುತ್ತಿದೆ ಎಂದು ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ನಿಲೇಕಣಿ ತಿಳಿಸಿದರು.

ಇದು ಕೆಲವು ಹಿತಾಸಕ್ತಿಯಿಂದ ಮಾಡಲ್ಪಟ್ಟ ಅಪಪ್ರಚಾರವೆಂದು ಆಧಾರ್ ಮಾಹಿತಿ ಸೋರಿಕೆ ಪ್ರಕರಣ ಕೂಲಂಕುಷವಾಗಿ ಅವಲೋಕಿಸಿದರೆ ತಿಳಿದುಬರುತ್ತದೆ ಎಂದು ಆಧಾರ್ ಸೋರಿಕೆ ಕುರಿತು ವರದಿ ಮಾಡಿದ್ದ ವರದಿಗಾರ್ತಿ ವಿರುದ್ಧ ಎಫ್ ಐಆರ್ ಉಲ್ಲಂಘಿಸಿ ಅವರು ಹೇಳಿದರು.