ಡಿಕೆಶಿ ಬುಕ್ ಮಾಡಿದ ಮುಂಬೈ ಹೊಟೇಲ್ ಕೊಠಡಿ ರದ್ದು

ಡಿಕೆಶಿ ಬುಕ್ ಮಾಡಿದ ಮುಂಬೈ ಹೊಟೇಲ್ ಕೊಠಡಿ ರದ್ದು

YK   ¦    Jul 10, 2019 10:53:16 AM (IST)
 ಡಿಕೆಶಿ ಬುಕ್ ಮಾಡಿದ ಮುಂಬೈ ಹೊಟೇಲ್ ಕೊಠಡಿ ರದ್ದು

ಬೆಂಗಳೂರು:  ಮುಂಬೈನ ರಿನೈಸೆನ್ಸ್ ಹೊಟೇಲ್ ನಲ್ಲಿ ಅತೃಪ್ತ ಶಾಸಕರನ್ನು ಭೇಟಿಯಾಗಲು ತೆರಳಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕಾಯ್ದಿರಿಸಿದ ಕೊಠಡಿಯನ್ನು ಹೊಟೇಲ್ ರದ್ದುಗೊಳಿಸಿದೆ. ಆದರೆ ಡಿಕೆಶಿ ಯಾವುದೇ ಕಾರಣಕ್ಕೂ ಅತೃಪ್ತರನ್ನು ಜತೆ ಮಾತನಾಡದೆ ಅಲ್ಲಿಂದ್ದ ತೆರಳಲ್ಲ ಎಂದು ಹೇಳಿದ್ದಾರೆ.

ತಾವು ಭಯೋತ್ಪಾದಕರಲ್ಲ. ಹೊಟೇಲ್ ಗೆ ಹಾನಿ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ಯಾರೂ ಸ್ನೇಹಿತರೂ ಅಲ್ಲ, ಶತ್ರುಗಳೂ ಅಲ್ಲ. ನಾನು ಅತೃಪ್ತರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.