ಟಿಕೆಟ್ ಕೈತಪ್ಪಿದವರ ಬೆಂಬಲಿಗರ ಆಕ್ರೋಶ: ಕಾಂಗ್ರೆಸ್ ಕಚೇರಿ ಪೀಠೋಪಕರಣ ಧ್ವಂಸ

ಟಿಕೆಟ್ ಕೈತಪ್ಪಿದವರ ಬೆಂಬಲಿಗರ ಆಕ್ರೋಶ: ಕಾಂಗ್ರೆಸ್ ಕಚೇರಿ ಪೀಠೋಪಕರಣ ಧ್ವಂಸ

HSA   ¦    Apr 16, 2018 04:19:30 PM (IST)
ಟಿಕೆಟ್ ಕೈತಪ್ಪಿದವರ ಬೆಂಬಲಿಗರ ಆಕ್ರೋಶ: ಕಾಂಗ್ರೆಸ್ ಕಚೇರಿ ಪೀಠೋಪಕರಣ ಧ್ವಂಸ

ಬೆಂಗಳೂರು: ಕಾಂಗ್ರೆಸ್ ಟಿಕೆಟ್ ಕೈತಪ್ಪಿದವರ ಬೆಂಬಲಿಗರಿಂದ ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಚೇರಿಗೆ ಹಾನಿ ಮಾಡಲಾಗಿದೆ.

ಸೋಮವಾರ ಈ ಎರಡೂ ಕಡೆಗಳಲ್ಲಿ ಪ್ರತಿಭಟನೆ ತೀವ್ರವಾಗಿದ್ದು, ಮಂಡ್ಯದಲ್ಲಿ ರವಿಕುಮಾರ್ ಗೌಡ ಗಣಿಗ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲ್ಲವೆಂಬ ಕಾರಣಕ್ಕಾಗಿ ಅವರ ಬೆಂಬಲಿಗರು ಕಾಂಗ್ರೆಸ್ ಕಚೇರಿಗೆ ನುಗ್ಗಿ ಕುರ್ಚಿ, ಕಿಟಕಿ ಗಾಜು ಒಡೆದು ಹಾಕಿದರು.

ಚಿಕ್ಕಮಗಳೂರಿನಲ್ಲಿ ಗಾಯತ್ರಿ ಶಾಂತೇಗೌಡ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕಚೇರಿಯಲ್ಲಿ ಪೀಠೋಪಕರಣಗಳನ್ನು ಧ್ವಂಸ ಮಾಡಿದರು.