ಮಕ್ಕಳನ್ನು ಹುಟ್ಟುಹಬ್ಬಕ್ಕೆ ಕರೆಸಿ ಬಿಸಿಲಿನಲ್ಲಿ ನಿಲ್ಲಿಸಿದ ಶಾಸಕ!

ಮಕ್ಕಳನ್ನು ಹುಟ್ಟುಹಬ್ಬಕ್ಕೆ ಕರೆಸಿ ಬಿಸಿಲಿನಲ್ಲಿ ನಿಲ್ಲಿಸಿದ ಶಾಸಕ!

HSA   ¦    Jan 12, 2018 04:49:16 PM (IST)
ಮಕ್ಕಳನ್ನು ಹುಟ್ಟುಹಬ್ಬಕ್ಕೆ ಕರೆಸಿ ಬಿಸಿಲಿನಲ್ಲಿ ನಿಲ್ಲಿಸಿದ ಶಾಸಕ!

ಬೆಂಗಳೂರು: ಶಾಸಕರೊಬ್ಬರ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳು ಮೈದಾನದಲ್ಲಿ ಬಿಸಿಲಿನಲ್ಲಿ ಒಣಗಿದ ಘಟನೆ ಗುರುವಾರ ನಡೆದಿದೆ.

ಶಾಸಕ ಎನ್. ಎ. ಹ್ಯಾರೀಸ್ ಹುಟ್ಟುಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆ ಕಾಲ ಬಿಸಿಲಿನಲ್ಲಿ ಕಾಯಬೇಕಾಯಿತು. ಗರುಡ ಮಾಲ್ ನಲ್ಲಿ ಇರುವ ಪೊಲೀಸ್ ಹಾಕಿ ಮೈದಾನದಲ್ಲಿ ಶಾಸಕ ಹ್ಯಾರೀಸ್ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ ಮತ್ತು ಭೋಜನಕೂಟ ಆಯೋಜಿಸಲಾಗಿದೆ. ಎಲ್ಲಾ ಶಾಲಾ ಮಕ್ಕಳನ್ನು ಕರೆದುಕೊಂಡು ಬರಬೇಕೆಂದು ಶಾಸಕರ ಕಚೇರಿಯಿಂದ ಶಾಲೆಗಳಿಗೆ ಆದೇಶ ಹೋಗಿತ್ತು.

ಆದರೆ ಶಾಸಕರು ಎರಡು ಗಂಟೆ ಕಾಲ ವಿಳಂಬವಾಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಒಂದು ಗಂಟೆವರೆಗೂ ಮಕ್ಕಳಿಗೆ ಊಟ ವ್ಯವಸ್ಥೆ ಮಾಡಲಾಗಿಲ್ಲ. ಮಕ್ಕಳು ಬಿಸಿಲಿನಲ್ಲೇ ಹೊಟ್ಟೆ ಹಸಿವಿನಿಂದ ನಿಂತಿದ್ದರು.

ಮಕ್ಕಳಿಗೆ ಶಾಸಕರು ಬಂದು ಶಾಸಕರು ಬ್ಯಾಗ್ ವಿತರಿಸಿದರು. ಆದರೆ ವಿಳಂಬವಾಗಿ ಬಂದ ಶಾಸಕರ ವಿರುದ್ಧ ಶಿಕ್ಷಕರು ಮಾತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.