ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆ: ಸಿಡಿಲಿಗೆ ಮೂವರು ಬಲಿ

ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆ: ಸಿಡಿಲಿಗೆ ಮೂವರು ಬಲಿ

HSA   ¦    Apr 15, 2018 04:26:54 PM (IST)
ರಾಜ್ಯದ ಹಲವೆಡೆ ಗಾಳಿ ಸಹಿತ ಮಳೆ: ಸಿಡಿಲಿಗೆ ಮೂವರು ಬಲಿ

ಬೆಂಗಳೂರು: ಮುಂಗಾರು ಪೂರ್ವ ಮಳೆಯು ಭಾನುವಾರ ಹೊಸಪೇಟೆ, ಬೀದರ್ ನಲ್ಲಿ ಜನರಿಗೆ ತಂಪೆರಚಿದ್ದು, ಭಾರೀ ಗಾಳಿ ಮಳೆಯಿಂದಾಗಿ ಅನ್ನದಾತರು ಕೂಡ ನಿಟ್ಟುಸಿರುವ ಬಿಡುವಂತೆ ಆಗಿದೆ.

ಜೂನ್ ನಲ್ಲಿ ಮುಂಗಾರು ಆಗಮನಿಸುವ ಸಂಭವವಿದ್ದು, ಈ ಸಲ ಸರಾಸರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಗಾಳಿ ಸಹಿತ ಭಾರೀ ಮಳೆಯಾಗಿದೆ. ಬೀದರ್ ನಲ್ಲಿ ಕೂಡ ಗಾಳಿ ಸಹಿತ ಮಳೆಯಾಗಿದ್ದು, ಜನರು ಸಂಭ್ರಮಿಸುವಂತಾಗಿದೆ.

ಸಿಡಿಲಿಗೆ ಮೂವರು ಬಲಿ
ಸಿಡಿಲು ಬಡಿದು ಯಾದಗಿರಿಯಲ್ಲಿ ಮೌನೇಶ್(12) ಎಂಬ ಬಾಲಕ ಮೃತಪಟ್ಟಿದ್ದಾನೆ. ಯಾದಗಿರಿಯ ಮೈಲಾಪುರದಲ್ಲಿ ಕುಮಾರ್(30) ಎಂಬವರು ಮರದಡಿಯಲ್ಲಿ ನಿಂತಿದ್ದಾಗ ಮೃತಪಟ್ಟಿದ್ದಾರೆ. ಇವರ ಜತೆಗಿದ್ದ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾಯಚೂರಿನ ಸಿಂಧನೂರು ತಾಲೂಕಿನ ಸಾಲಗುಂದದಲ್ಲಿ ಮೆಹಬೂಬ ರಾಜಾ ನಾಯ್ಕ್(34) ಸಿಡಿಲಿಗೆ ಬಲಿಯಾಗಿದ್ದಾರೆ.