ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ!

ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ!

HSA   ¦    May 16, 2018 02:12:48 PM (IST)
ಕುಮಾರಸ್ವಾಮಿ ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ!

ಬೆಂಗಳೂರು: ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿರುವ ಸಿದ್ದರಾಮಯ್ಯ ಕಾಂಗ್ರೆಸ್ ನ್ನು ಅವನತಿ ಮಾಡುವುದು ಖಚಿತ ಎಂದು ವಿಧಾನಸಭಾ ಕೆ. ಬಿ. ಕೋಳಿವಾಡ ಆರೋಪ ಮಾಡಿದರು.

ಸಿದ್ದರಾಮಯ್ಯಗೆ ನಾಚಿಕೆ ಆಗ್ಬೇಕು. ಬಾದಾಮಿಯಲ್ಲಿ ಕೆಲವೇ ಅಂತರದಿಂದ ಗೆದ್ದು, ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಎರಡು ಪಕ್ಷಗಳು ಸೇರಿ ಸರ್ಕಾರ ರಚಿಸಬೇಕು. ಆದರೆ ಕುಮಾರಸ್ವಾಮಿ ಅವರನ್ನು ಸಿಎಂ ಆಗಲು ಸಿದ್ದರಾಮಯ್ಯ ಬಿಡಲ್ಲ ಎಂದು ಕೋಳಿವಾಡ ಹೇಳಿದರು.

ಸಿದ್ದರಾಮಯ್ಯಗೆ ಯಾವುದೇ ಹುದ್ದೆ ನೀಡದಂತೆ ನಾನು ರಾಹುಲ್ ಗಾಂಧಿಗೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಮುಂದೆ ಯಾವತ್ತೂ ಅಧಿಕಾರಕ್ಕೆ ಬರೋದೆ ಇಲ್ಲ ಎಂದು ಕೋಳಿವಾಡ ಆಕ್ರೋಶದಿಂದ ನುಡಿದರು.