ಬೆಂಗಳೂರಿನ ವಿಜ್ಞಾನ ಕೇಂದ್ರದಲ್ಲಿ ಸ್ಫೋಟ: ಒಬ್ಬ ಮೃತ್ಯು

ಬೆಂಗಳೂರಿನ ವಿಜ್ಞಾನ ಕೇಂದ್ರದಲ್ಲಿ ಸ್ಫೋಟ: ಒಬ್ಬ ಮೃತ್ಯು

HSA   ¦    Dec 05, 2018 07:07:50 PM (IST)
ಬೆಂಗಳೂರಿನ ವಿಜ್ಞಾನ ಕೇಂದ್ರದಲ್ಲಿ ಸ್ಫೋಟ: ಒಬ್ಬ ಮೃತ್ಯು

ಬೆಂಗಳೂರು: ಇಲ್ಲಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ)ನಲ್ಲಿ ನಡೆದ ಸ್ಪೋಟದಲ್ಲಿ ಸಂಶೋಧಕರೊಬ್ಬರು ಮೃತಪಟ್ಟು, ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ 2.20ರ ವೇಳೆ ನಡೆದಿದೆ ಎಂದು ವರದಿಗಳು ಹೇಳಿವೆ.

ಮೃತರನ್ನು ಮನೋಜ್ ಕುಮಾರ್(27) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಅತುಲ್ಯ ಕುಮಾರ್, ನರೇಶ್ ಕುಮಾರ್ ಮತ್ತು ಕಾರ್ತಿಕ್ ಶೆಣೈ ಎಂದು ಗುರುತಿಸಲಾಗಿದೆ.

ಹೈಡ್ರೋಜನ್ ಸಿಲಿಂಡರ್ ಸಿಡಿದ ಪರಿಣಾಮ ನಾಲ್ಕು ಮಂದಿ ಸಂಶೋಧಕರು ಎತ್ತರಕ್ಕೆ ಎಸೆಯಲ್ಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಸುಮಾರು 20 ಅಡಿ ಎತ್ತರಕ್ಕೆ ಎಸೆಯಲ್ಪಟ್ಟಿದ್ದಾರೆ ಎಂದು ಐಐಎಸ್ ಸಿಯ ಭದ್ರತಾ ಮುಖ್ಯಸ್ಥರು ತಿಳಿಸಿದ್ದಾರೆ.

ಸುಮಾರು 2.20ರ ವೇಳೆ ಈ ಸ್ಫೋಟ ನಡೆದಿದೆ. ಇದರಲ್ಲಿ ಒಬ್ಬರು 20 ಅಡಿ ಎತ್ತರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ಮೂವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂತಹ ಘಟನೆಯು ಇಲ್ಲಿ ಮೊದಲ ಸಲ ನಡೆಯುತ್ತಿದೆ ಎಂದು ಹೇಳಲಾಗಿದೆ.

ಗಾಯಾಗಳುಗಳಿಗೆ ತೀವ್ರ ರೀತಿಯ ಗಾಯಗಳು ಆಗಿದೆ. ಇದರಲ್ಲಿ ಸುಟ್ಟಗಾಯ ಮತ್ತು ತರುಚಿದ ಗಾಯಗಳು ಇವೆ. ಇವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದವರು ಸ್ಫೋಟಕ್ಕೆ ನಿಖರ ಕಾರಣ ತಿಳಿಯಲು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.