ಶಿಕ್ಷಕ-ಶಿಕ್ಷಕಿಯರಿದ್ದ ವಾಟ್ಸಾಪ್ ಗ್ರೂಪ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ ಅಧಿಕಾರಿ

ಶಿಕ್ಷಕ-ಶಿಕ್ಷಕಿಯರಿದ್ದ ವಾಟ್ಸಾಪ್ ಗ್ರೂಪ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ ಅಧಿಕಾರಿ

HSA   ¦    Jan 12, 2019 05:07:02 PM (IST)
ಶಿಕ್ಷಕ-ಶಿಕ್ಷಕಿಯರಿದ್ದ ವಾಟ್ಸಾಪ್ ಗ್ರೂಪ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ ಅಧಿಕಾರಿ

ಬೆಂಗಳೂರು: ಶಿಕ್ಷಣ ಅಧಿಕಾರಿಯೊಬ್ಬರು ಶಿಕ್ಷಕರು ಹಾಗೂ ಶಿಕ್ಷಕಿಯರು ಇದ್ದ ವಾಟ್ಸಾಪ್ ಗ್ರೂಪ್ ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ಕಳುಹಿಸಿರುವುದು ಈಗ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.

ಶಾಲಾ ಚಟುವಟಿಕೆಗಳ ವಿನಿಮಯ ಮಾಡಲು ಇದ್ದ ವಾಟ್ಸಾಪ್ ಗ್ರೂಪ್ ಗೆ ಬೆಂಗಳೂರು ದಕ್ಷಿಣ ವಿಭಾಗದ 2 ವಲಯದ ಅಧಿಕಾರಿಯೊಬ್ಬ ಅಶ್ಲೀಲ ವಿಡಿಯೋ ಹಾಗೂ ಚಿತ್ರಗಳನ್ನು ಕಳುಹಿಸಿದ್ದಾರೆ.

ಈ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದ ಶಿಕ್ಷಕಿಯರು ಗ್ರೂಪ್ ನಿಂದಲೇ ಎಕ್ಸಿಟ್ ಆಗಿದ್ದಾರೆ. ಈ ಬಗ್ಗೆ ಬಿಇಒ ಮತ್ತು ಡಿಡಿಪಿಐಗೆ ದೂರು ನೀಡಲು ಶಿಕ್ಷಕರು ತೀರ್ಮಾನಿಸಿದ್ದಾರೆ.

ಆದರೆ ತಾನು ಕಳುಹಿಸಿರುವಂತಹ ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಅಧಿಕಾರಿ ಶಿಕ್ಷಕರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾನೆ ಎಂದು ತಿಳಿದುಬಂದಿದೆ.