ಕಾಂಪೌಡ್ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ

ಕಾಂಪೌಡ್ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ

YK   ¦    Apr 14, 2019 10:12:41 AM (IST)
ಕಾಂಪೌಡ್ ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ

ಬೆಂಗಳೂರು: ಕಾಂಪೌಡ್ ಕುಸಿದು ಇಬ್ಬರು ಜಾರ್ಖಂಡ್ ನ ಕಾರ್ಮಿಕರು ಸಾವನ್ನಪ್ಪಿದ ಘಟನೆ ನಗರದ ಪುಲಕೇಶಿನಗರದಲ್ಲಿ ಶನಿವಾರ ಸಂಜೆ ನಡೆದಿದೆ.

ಈ ಘಟನೆ ಒಳಚರಂಡಿ ಕೆಲಸವನ್ನು ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಪುಲಕೇಶಿನಗರದ ಪೊಲೀಸರು ತನಿಖೆ ಆರಂಭಿಸಿದ್ದು, ಮೃತರನ್ನು ಸುದರ್ಶನ್ ಹಾಗೂ ಶಫೀಕ್ ಎಂದು ಗುರುತಿಸಲಾಗಿದೆ.

ಒಳಚರಂಡಿ ಕೆಲಸಕ್ಕಾಗಿ ಜಾರ್ಖಂಡ್ ನ 10 ಕಾರ್ಮಿಕರನ್ನು ಕರೆ ತರಲಾಗಿದ್ದು, ಜೆಸಿಬಿ ಮುಖಾಂತರ ಒಳಚರಂಡಿಯನ್ನು ಅಗೆದು ಅದರೊಳಗೆ ಕಾಂಕ್ರೀಟ್ ಕೆಲಸವನ್ನು ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಈ ಸಂಬಂಧ ಪುಲಕೇಶಿನಗರದಲ್ಲಿ ಪ್ರಕರಣ ದಾಖಲಾಗಿದೆ.