ಮಕ್ಕಳಿಗಾಗಿ ಕಾಂಗ್ರೆಸ್ ನಾಯಕರಿಂದ ಟಿಕೆಟ್ ಲಾಬಿ

ಮಕ್ಕಳಿಗಾಗಿ ಕಾಂಗ್ರೆಸ್ ನಾಯಕರಿಂದ ಟಿಕೆಟ್ ಲಾಬಿ

HSA   ¦    Dec 05, 2017 11:01:34 AM (IST)
ಮಕ್ಕಳಿಗಾಗಿ ಕಾಂಗ್ರೆಸ್ ನಾಯಕರಿಂದ ಟಿಕೆಟ್ ಲಾಬಿ

ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗಾಗಲೇ ಸಚಿವ ಸ್ಥಾನವನ್ನು ಅನುಭವಿಸಿರುವ ಹಾಗೂ ಕೆಲವು ಹಿರಿಯ ನಾಯಕರು ತಮ್ಮ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ  ಮುಂದಿನ ವಿಧಾನಸಭೆಗೆ ಟಿಕೆಟ್ ಲಾಬಿ ನಡೆಸುತ್ತಿರುವುದಾಗಿ ಕಾಂಗ್ರೆಸ್ ಪಾಳಯದಿಂದ ತಿಳಿದುಬಂದಿರುವ ಸುದ್ದಿಯಾಗಿದೆ.

ವರುಣಾ ಕ್ಷೇತ್ರದಿಂದ ತನ್ನ ಪುತ್ರನನ್ನು ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಚಿಂತನೆ ಮಾಡಿದ್ದಾರೆ. ಇದರಿಂದ ನಾಯಕನ ಸಾಲಿನಲ್ಲಿ ಇತರರು ಕೂಡ ತಮ್ಮ ಮಕ್ಕಳಿಗಾಗಿ ಭಾರೀ ಟಿಕೆಟ್ ಲಾಬಿ ನಡೆಸುತ್ತಿದ್ದಾರೆ. ಸಚಿವರಾಗಿರುವ ಟಿ.ಬಿ. ಜಯಚಂದ್ರ, ಎ.ಮಂಜು, ರಾಮಲಿಂಗಾ ರೆಡ್ಡಿ, ಕಾಗೋಡು ತಿಮ್ಮಪ್ಪ ಮತ್ತು ಎಚ್. ಸಿ. ಮಹದೇವಪ್ಪ ತಮ್ಮ ಮಕ್ಕಳಿಗಾಗಿ ತಮ್ಮ ಸ್ವಕ್ಷೇತ್ರ ಬಿಟ್ಟುಕೊಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ತಮ್ಮ ಪುತ್ರನಿಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಮಹದೇವಪ್ಪ ಒತ್ತಾಯಿಸುತ್ತಿದ್ದಾರೆ. ಟಿಕೆಟ್ ಸಿಗದೇ ಇದ್ದರೆ ನರಸೀಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡಲು ಬಯಸಿದ್ದಾರೆ. ಕಾಗೋಡು ತಿಮ್ಮಪ್ಪ ಮತ್ತು ಎ. ಮಂಜು ಸ್ವ ಕ್ಷೇತ್ರಗಳನ್ನು ಮಕ್ಕಳಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ.