ಗೌರಿಶಂಕರ ಸ್ವಾಮಿ ಇನ್ನಿಲ್ಲ

ಗೌರಿಶಂಕರ ಸ್ವಾಮಿ ಇನ್ನಿಲ್ಲ

Jan 11, 2017 12:46:17 PM (IST)

ಬೆಂಗಳೂರು: ಕಳೆದ ಹಲವು ದಿನಗಳಿಂದ ಪಾರ್ಶವಾಯುವಿನಿಂದ ಬಳಲುತ್ತಿದ್ದ ಗೌರಿಶಂಕರ ಸ್ವಾಮಿ ಅವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ.

ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಗೌರಿಶಂಕರ ಸ್ವಾಮೀಜಿ(71) ಅವರು ಪಾರ್ಶವಾಯುವಿನಿಂದ ಬಳಲುತ್ತಿದ್ದು,  ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪಾರ್ಶವಾಯುವಿನಿಂದಾಗಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರಿಗೆ ಚಿಕಿತ್ಸೆ  ನೀಡಲಾಗುತ್ತಿತ್ತು. ಅಲ್ಲದೆ ಗೌರಿಶಂಕರ ಸ್ವಾಮಿ ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಗೌರಿಶಂಕರ ಸ್ವಾಮಿ ವಿಧಿವಶರಾಗಿದ್ದಾರೆ.

1987ರಲ್ಲಿ ಸಿದ್ದಗಂಗಾ ಮಠದಲ್ಲಿ ಸಲಿಂಕಾಮ ನಡೆಸಿದ ಆರೋಪದ ಮೇರೆಗೆ ಮಠದಿಂದ ಹೊರಹಾಕಲ್ಪಟ್ಟಿದ್ದ ಗೌರಿಶಂಕರ ಸ್ವಾಮಿ ಅವರು, ತಮ್ಮ ಗುರುಗಳಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯನ್ನು ನೋಡಲು  ಬಯಸಿದ್ದರು. ಈ ಹಿಂದೆ ಅವರನ್ನು ನೋಡಲು ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿತ್ತು. ಕನಿಷ್ಠ ಪಕ್ಷ ಅವರ ಕೊನೇ ಗಳಿಗೆಯಲ್ಲಾದರೂ ಶಿವಕುಮಾರ ಸ್ವಾಮೀಜಿಗಳು ಅವರನ್ನು ನೋಡಲು ಆಗಮಿಸುತ್ತಾರೆ ಎಂದು  ಭಾವಿಸಿದ್ದರು. ಆದರೆ ಅವರ ಕೊನೆಯ ಆಸೆಯೂ ಈಡೇರಲಿಲ್ಲ. ನಿನ್ನೆ ಊಟದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಇಂದು ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.