ರವಿ ಡಿ. ಚನ್ನಣ್ಣವರ್ ಸಹಿತ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರವಿ ಡಿ. ಚನ್ನಣ್ಣವರ್ ಸಹಿತ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ

HSA   ¦    Mar 10, 2018 02:29:40 PM (IST)
ರವಿ ಡಿ. ಚನ್ನಣ್ಣವರ್ ಸಹಿತ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ಮೈಸೂರು ಎಸ್ಪಿಯಾಗಿದ್ದ ರವಿ ಡಿ. ಚನ್ನಣ್ಣನವರ್ ಅವರ ಸಹಿತ ಸುಮಾರು 20 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ವಿಧಾನಸಭೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ.

ರವಿ ಡಿ. ಚನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ಹಲವು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ವರ್ಗಾವಣೆಗೊಂಡವರ ಪಟ್ಟಿ
ಎಸ್. ರವಿ-ಐಜಿಪಿ(ಬಳ್ಳಾರಿ ವಲಯ)
ಬಿ. ದಯಾನಂದ-ಕೇಂದ್ರ ವಲಯ ಐಜಿಪಿ
ಅಮೃತ್ ಪೌಲ್-ಐಜಿಪಿ(ಆಡಳಿತ)
ಸೌಮೇಂದು ಮುಖರ್ಜಿ-ದಕ್ಷಿಣ ವಲಯ ಐಜಿಪಿ
ಎಂ.ಎನ್. ಅನುಚೇತ್-ಎಸ್ಐಟಿ ತನಿಖಾಧಿಕಾರಿ, ಸಿಐಡಿ ಎಸ್ಪಿ
ರವಿ ಡಿ. ಚೆನ್ನಣ್ಣನವರ್-ದಕ್ಷಿಣ ವಲಯ ಡಿಸಿಪಿ
ವಿಪುಲ್ ಕುಮಾರ್-ಐಜಿಪಿ(ನಿರ್ದೇಶಕರು, ಮೈಸೂರು ಪೊಲೀಸ್ ಅಕಾಡಮಿ)
ಅಮಿತ್ ಸಿಂಗ್-ಮೈಸೂರು ಎಸ್ಪಿ
ಕುಲದೀಪ್ ಕುಮಾರ್-ಕೆಸ್ ಆರ್ ಪಿ, ಬೆಂಗಳೂರು
ನಿಖಾಮ್ ಪ್ರಕಾಶ್ ಅಮೃತ್-ವಿಜಯಪುರ ಎಸ್ಪಿ
ಭೀಮಾ ಪ್ರಕಾಸ್ ಅಮೃತ್-ಬೆಂಗಳೂರು ಗ್ರಾಮಾಂತರ ಎಸ್ಪಿ
ಜಿ. ರಾಧಿಕಾ-ಎಸ್ಪಿ(ಎಸಿಬಿ, ಬೆಂಗಳೂರು)
ಡಾ. ಅನೂಪ್ ಎ. ಶೆಟ್ಟಿ-ಎಸ್ಪಿ(ಗುಪ್ತಚರ, ಬೆಂಗಳೂರು)
ಕಲಾ ಕೃಷ್ಣಮೂರ್ತಿ-ಡಿಸಿಪಿ(ಈಶಾನ್ಯ ವಲಯ, ಬೆಂಗಳೂರು)
ಉಮೇಶ್ ಕುಮಾರ್-ಐಜಿಪಿ ಮತ್ತು ಕೆಎಸ್ ಆರ್ ಟಿಸಿ ಭದ್ರತಾ ನಿರ್ದೇಶಕರು
ರೇಣುಕಾ ಎಸ್. ಸುಕುಮಾರ್-ಕೊಪ್ಪಳ ಎಸ್ಪಿ
ಗಿರೀಶ್-ಮಂಡ್ಯ ಎಸ್ಪಿ