ಸಂಚಾರಿ ನಿಯಮದ ದಂಡದಲ್ಲಿ ಇಳಿಮುಖ: ಸಿಎಂ ಬಿಎಸ್ ಯಡಿಯೂರಪ್ಪ

ಸಂಚಾರಿ ನಿಯಮದ ದಂಡದಲ್ಲಿ ಇಳಿಮುಖ: ಸಿಎಂ ಬಿಎಸ್ ಯಡಿಯೂರಪ್ಪ

YK   ¦    Sep 12, 2019 12:53:03 PM (IST)
ಸಂಚಾರಿ ನಿಯಮದ ದಂಡದಲ್ಲಿ ಇಳಿಮುಖ: ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಸರ್ಕಾರ ಶೀಘ್ರದಲ್ಲೇ ಸಂಚಾರಿ ನಿಯಮದ ದಂಡವನ್ನು ಇಳಿಕೆ ಮಾಡಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಗುಜರಾತ್ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಸಂಚಾರಿ ನಿಯಮವನ್ನು ರಾಜ್ಯದಲ್ಲಿ ಅನ್ವಯಿಸಲಾಗುವುದು. .

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಾರಿಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಇರುವ ನಿಯಮದಲ್ಲಿ ಬದಲಾವಣೆ ತರುವ ಬಗ್ಗೆ ಚಿಂತಿಸಲಾಗಿದೆ. ಜನರು ಹೊಸ ನಿಯಮದ ಬಗ್ಗೆ ಆಕ್ರೋಶರಾಗಿರುವುದು ತಿಳಿದಿದೆ ಎಂದರು.

ಈ ಸಂಬಂಧ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಇನ್ನೆರಡು ದಿನಗಳಲ್ಲಿ ಸಂಚಾರಿ ನಿಯಮ ಸಂಬಂಧ ಒಂದು ಒಳ್ಳೆಯ ಸುದ್ದಿ ಹೊರಬೀಳಲಿದೆ ಎಂದರು.