ಐಎಎಂ ಸಂಸ್ಥೆ ಜಪ್ತಿ ಮಾಡಿದ ಎಸ್ ಐಟಿ ತಂಡ

ಐಎಎಂ ಸಂಸ್ಥೆ ಜಪ್ತಿ ಮಾಡಿದ ಎಸ್ ಐಟಿ ತಂಡ

HSA   ¦    Jun 13, 2019 06:45:48 PM (IST)
ಐಎಎಂ ಸಂಸ್ಥೆ ಜಪ್ತಿ ಮಾಡಿದ ಎಸ್ ಐಟಿ ತಂಡ

ಬೆಂಗಳುರು: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿರುವ ಶಿವಾಜಿನಗರದಲ್ಲಿರುವ ಐಎಂಎ ಜ್ಯುವೆಲ್ಲರ್ಸ್ ಸಂಸ್ಥೆಯನ್ನು ಗುರುವಾರ ಎಸ್ ಐಟಿ ಅಧಿಕಾರಿಗಳು ಜಪ್ತಿ ಮಾಡಿ ಸೀಲ್ ಮಾಡಿದರು.

ಐಎಂಎ ಜ್ಯುವೆಲ್ಲರ್ಸ್ ನ ಏಳು ನಿರ್ದೇಶಕರನ್ನು ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಂಧಿಸಿ, ಎಸ್ ಐಟಿಗೆ ವರ್ಗಾಯಿಸಿದ್ದಾರೆ. ರವಿಕಾಂತೇಗೌಡ ನೇತೃತ್ವದ ಎಸ್ ಐಟಿ ತಂಡವು ಆರೋಪಿಗಳ ವಿಚಾರಣೆ ನಡೆಸುತ್ತಿದೆ.

ಐಎಂಎ ಜ್ಯುವೆಲ್ಲರ್ಸ್ ನ ಸ್ಥಾಪಕ ಮಾನ್ಸೂರ್ ಖಾನ್ ತನ್ನ ಕಾರನ್ನು ಕೆಐಎಎಲ್ ನ ಪಾರ್ಕಿಂಗ್ ನಲ್ಲಿ ಸಿಲ್ಲಿಸಿ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ರೇಂಜ್ ರೋವರ್ ಕಾರನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ಹಗರಣದ ಬಗ್ಗೆ 25 ಸಾವಿರಕ್ಕೂ ಅಧಿಕ ದೂರುಗಳು ಬಂದಿದೆ. ರಾಜ್ಯ, ಹೊರರಾಜ್ಯ ಹಾಗೂ ಬೇರೆ ಊರುಗಳಿಂದಲೂ ದೂರುಗಳು ಬರುತ್ತಿದೆ.