ಮಧು ಬಂಗಾರಪ್ಪ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ: ವಿಶ್ವನಾಥ್

ಮಧು ಬಂಗಾರಪ್ಪ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ: ವಿಶ್ವನಾಥ್

HSA   ¦    Jun 25, 2019 02:32:05 PM (IST)
ಮಧು ಬಂಗಾರಪ್ಪ ಜೆಡಿಎಸ್ ರಾಜ್ಯಾಧ್ಯಕ್ಷರಾಗಲಿ: ವಿಶ್ವನಾಥ್

ಬೆಂಗಳೂರು: ಮಧು ಬಂಗಾರಪ್ಪ ಅವರನ್ನು ಮುಂದಿನ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂದು ಎಚ್. ವಿಶ್ವನಾಥ್ ಜೆಡಿಎಸ್ ವರಿಷ್ಠರಿಗೆ ಸಲಹೆ ನೀಡಿರುವರು.

ಮಂಗಳವಾರ ಈ ಬಗ್ಗೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವನಾಥ್ ಅವರು, ಮಧು ಬಂಗಾರಪ್ಪ ಅವರು ಯುವ ನಾಯಕ. ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆಯಾಗುವುದು ಎಂದರು.

ಇದೇ ವೇಳೆ ವಿಶ್ವನಾಥ್ ಅವರು ಗ್ರಾಮವಾಸ್ತವ್ಯ ಮಾಡುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹೊಗಳಿದರು.

ಜನರ ಸಮಸ್ಯೆಯು ಹೆಚ್ಚಾಗುತ್ತಿದೆ ಮತ್ತು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲು ಗ್ರಾಮವಾಸ್ತವ್ಯವು ಅಗತ್ಯವಾಗಿದೆ ಎಂದು ವಿಶ್ವನಾಥ್ ಅವರು ತಿಳಿಸಿದರು.