ನೀಲಿ ಚಿತ್ರದ ರಾಣಿ ಸನ್ನಿ ಬೆಂಗಳೂರಿಗೆ ಬರೋದು ಬೇಡ ಎಂದ ಕರವೇ

ನೀಲಿ ಚಿತ್ರದ ರಾಣಿ ಸನ್ನಿ ಬೆಂಗಳೂರಿಗೆ ಬರೋದು ಬೇಡ ಎಂದ ಕರವೇ

YK   ¦    Dec 07, 2017 05:20:16 PM (IST)
ನೀಲಿ ಚಿತ್ರದ ರಾಣಿ ಸನ್ನಿ ಬೆಂಗಳೂರಿಗೆ ಬರೋದು ಬೇಡ ಎಂದ ಕರವೇ

ಬೆಂಗಳೂರು: ಟೈಮ್ಸ್ ಕ್ರಿಯೇಷನ್ಸ್ ಜಾಹೀರಾತು ಕಂಪೆನಿಯವರು ಇದೇ 31ರಂದು ಸನ್ನಿನೈಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದನ್ನು ವಿರೋಧಸಿ ಇದೇ 7ರಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಡಿ.31ರಂದು ರಾತ್ರಿ ಬಾಲಿವುಡ್ ನಟಿ ಸನ್ನಿಲಿಯೋನ್ ಅವರನ್ನು ವಿಶೇಷವಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಮೋಜು ಮಸ್ತಿ ಮಾಡಲಿಕ್ಕೆ ನಮ್ಮ ಕರ್ನಾಟಕವನ್ನು ಉತ್ತರ ಭಾರತದವರು ನಮ್ಮ ಕರ್ನಾಟಕದಲ್ಲಿ ಕನ್ನಡಿಗರನ್ನು ಕಡೆಗಣಿಸುತ್ತಿದ್ದಾರೆ. ಸನ್ನಿಲಿಯೋನ್ ಎಂಬಾಕೆ ನಮ್ಮ ಭಾರತದವರೇ ಅಲ್ಲ. ನಮ್ಮ ಸಂಸ್ಕೃತಿಯ ಗಂಧನೇ ಗೊತ್ತಿಲ್ಲದ ಇಂತಹ ನೀಲಿ ಚಿತ್ರಗಳ ರಾಣಿ ಸನ್ನಿನೈಟ್ ಕಾರ್ಯಕ್ರಮವನ್ನು ಕರವೇ ಯುವ ಸೇನೆ ಖಂಡಿಸುತ್ತದೆ.

ಕಾರ್ಯಕ್ರಮವನ್ನು ವಿರೋಧಿಸಿ ಇದೇ 7ರಂದು ಶೇಷಾದ್ರಿಪುರಂ ಕಂಪೆನಿ ಮುಂಭಾಗದಲ್ಲಿ ಶಾಂತಿಯುತ ಪ್ರತಿಬಟನೆ ನಡೆಸಲಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಹರೀಶ್ ಹೇಳಿದ್ದಾರೆ.

More Images