ಕೊರೋನಾದಿಂದಾಗಿ ಸಂಭ್ರಮ ಕಳೆದುಕೊಂಡ ಯುಗಾದಿ ಹಬ್ಬ

ಕೊರೋನಾದಿಂದಾಗಿ ಸಂಭ್ರಮ ಕಳೆದುಕೊಂಡ ಯುಗಾದಿ ಹಬ್ಬ

HSA   ¦    Mar 25, 2020 11:43:18 AM (IST)
ಕೊರೋನಾದಿಂದಾಗಿ ಸಂಭ್ರಮ ಕಳೆದುಕೊಂಡ ಯುಗಾದಿ ಹಬ್ಬ

ಬೆಂಗಳೂರು: ದೇಶದಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಯುಗಾದಿ ಹಬ್ಬವು ರಾಜ್ಯದೆಲ್ಲೆಡೆ ಹೆಚ್ಚು ಸಂಭ್ರಮವಿಲ್ಲದೆ ಆಚರಿಸಲಾಗುತ್ತಿದೆ.

ಯುಗಾದಿಯಂದು ಹೆಚ್ಚಿನವರು ದೇವಸ್ಥಾನಗಳಿಗೆ ಭೇಟಿ ನೀಡುತ್ತಲಿದ್ದರು. ಆದರೆ ಈಗ ದೇವಸ್ಥಾನಗಳು ಬಂದ್ ಆಗಿದೆ ಮತ್ತು ಭಕ್ತರಿಗೆ ಅವಕಾಶ ನೀಡಲಾಗುತ್ತಿಲ್ಲ. ಸರ್ಕಾರ ಕೂಡ ಮನೆಯಲ್ಲೇ ಸರಳವಾಗಿ ಆಚರಿಸಿಕೊಳ್ಳಿ ಎಂದು ಸಲಹೆ ನೀಡಿದೆ.

ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳನ್ನು ನಡೆಸದೆ ಇರಲು ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ.