ಇದೇ 8, 9ರಂದು ಭಾರತ ಬಂದ್: ಸರ್ಕಾರಿ ಬಸ್ ಸ್ಥಗಿತ

ಇದೇ 8, 9ರಂದು ಭಾರತ ಬಂದ್: ಸರ್ಕಾರಿ ಬಸ್ ಸ್ಥಗಿತ

YK   ¦    Jan 07, 2019 12:52:03 PM (IST)
ಇದೇ 8, 9ರಂದು ಭಾರತ ಬಂದ್: ಸರ್ಕಾರಿ ಬಸ್ ಸ್ಥಗಿತ

ಬೆಂಗಳೂರು: ಸಾರಿಗೆ ಇಲಾಖೆಯ ಕಾರ್ಮಿಕ ಸಂಘಟನೆಗಳು ಜ. 8 ಮತ್ತು 9ರಂದು ಭಾರತ್ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ರಾಜ್ಯದಾದ್ಯಂತ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.

ರಸ್ತೆ ಸುರಕ್ಷತಾ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಈ ಬಂದ್ ನ್ನು ನಡೆಸಲಾಗುತ್ತಿದೆ. ಒಟ್ಟು 12 ಬೇಡಿಕೆಗಳನ್ನು ಮುಂದಿಟ್ಟು ಅಖಿಲ ಭಾರತ ಟ್ರೇಡ್ ಯೂನಿಯನ್, ಇಂಡಿಯನ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.

ಬಂದ್ ನಿಂದಾಗಿ ಆಟೋರಿಕ್ಷಾ, ಆಪ್ ಆಧರಿತ ಟ್ಯಾಕ್ಸಿಗಳು, ಬ್ಯಾಂಕ್ ಸೇವೆ ಹಾಗೂ ಲಾರಿ ಓಡಾಟ ಸ್ಥಗಿತಗೊಳ್ಳಲಿವೆ.